
ದ್ವಾರಕಾ ರಿಫ್ರೆಶ್ ಮೆಂಟ್ಸ್ ಮತ್ತು ಸಂತೃಪ್ತಿ ವೆಜ್, ಪುತ್ತೂರು ಇವರ ಸಹಯೋಗದಲ್ಲಿ ಜುಲೈ 24, 25 ಮತ್ತು 26ರಂದು ಕೆಮ್ಮಾರದ ಉಜೀವನ ಹಿರಿಯ ನಾಗರಿಕರ ಬಡಾವಣೆಯ ದ್ವಾರಕಾ ರಿಫ್ರೆಶ್ ಮೆಂಟ್ಸ್ ನಲ್ಲಿ ‘ದೋಸೆ ಮೇಳ’ ಯಶಸ್ವಿಯಾಗಿ ಸಂಪನ್ನಗೊಂಡಿತು.
ಮೊದಲ ದಿನ ದೋಸೆ ಮೇಳವನ್ನು ಬಳ್ಳಿ ಆಯುರ್ ಗ್ರಾಮದ ಡಾ. ಸುಪ್ರೀತ್ ಲೋಬೋ ಉದ್ಘಾಟಿಸಿದರು. ಮುಖ್ಯ ಅಭ್ಯಾಗತರಾಗಿ ಪಾಕಪ್ರವೀಣರಾದ ಶ್ರೀ ರವಿ ಕುಂಟಿನಿ, ಡಾ. ಮೇಧಾ ಪಟೇಲ್, ಸಾವಯವ ಉದ್ಯಮಿಗಳಾದ ಶ್ರೀ ಸುಹಾಸ್ ಮರಿಕೆ ಭಾಗಿಯಾಗಿದ್ದರು. ಸಭೆಯ ಅಧ್ಯಕ್ಷತೆಯನ್ನು ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ ವಹಿಸಿದ್ದರು. ದ್ವಾರಕಾ ಸಮೂಹ ಸಂಸ್ಥೆಗಳ ಸಹಾಯಕ ನಿರ್ದೇಶಕಿ ಶ್ರೀಮತಿ ಅಶ್ವಿನಿ ಎನ್., ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಅಮೃತಕೃಷ್ಣ ಎನ್. ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now