
ದಿನಾಂಕ 13/07/2026 ರಂದು ಬೆಳಿಗ್ಗೆ 10:00 ಗಂಟೆಗೆ 11 ನೇ ಹಂದಾಡಿ ಮಟಪಾಡಿ ಹಗಲು ಗ್ರಾಮ ಗಸ್ತು ಕರ್ತವ್ಯಕ್ಕೆ ನೇಮಿಸಿದ ಪಿರ್ಯಾದಿ ಕಿಶನ್, ಪೊಲೀಸ್ ಕಾನ್ಸ್‌ಟೇಬಲ್, ಬ್ರಹ್ಮಾವರ ಪೊಲೀಸ್ ಠಾಣೆ ಇವರು ಪೊಲೀಸ್ ಉಪನಿರೀಕ್ಷಕರ ಆದೇಶದಂತೆ ಸಂಜೆ 07.00 ಗಂಟೆಗೆ ರೌಡಿ ಅಸಾಮಿಯಾದ ನಿಖಿಲ್ ರವರನ್ನು ಚೆಕ್ ಮಾಡಲು ಅವರ ಮನೆ ಬಳಿ ತೆರಳಿ ಸದ್ರಿಯವರು ಮನೆ ಬಳಿ ಯಾರು ಕಾಣದೇ ಇದ್ದಾಗ ನಿಖಿಲ್ ಈತನ ಮೊಬೈಲ್ ಸಂಖ್ಯೆಗೆ ಪಿರ್ಯಾದುದಾರರು ಅವರ ಮೋಬೈಲ್ ನಿಂದ ಕರೆ ಮಾಡಿ ಆತನಲ್ಲಿ ನಾನು ಬೀಟ್ ಪೊಲೀಸ್ ನೀವು ಎಲ್ಲಿದ್ದೀರಿ ಎಂದು ಕೇಳಿದಾಗ, ನಾನು ಎಲ್ಲಿ ಇದ್ದರು ನಿನಗೆ ಯಾಕೆ ನನಗೆ ಬೇರೆ ಕೆಲಸ ಕಾರ್ಯ ಇಲ್ವ, ನೀನು ನನ್ನ ಮನೆಗೆ ಯಾಕೇ ಬಂದ್ದೀದ್ದೀಯಾ, ನೀನು ಅಲ್ಲೇ ಇರು ನಾನು ಬಂದು ನಿನ್ನನ್ನು ಕೊಂದು ಹಾಕುತ್ತೇನೆ ಎಂದು ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆಯನ್ನು ಹಾಕಿದ್ದು, ಪಿರ್ಯಾದುದಾರರು ವಾಪಾಸು ಠಾಣೆಗೆ ಬಂದಿರುತ್ತಾರೆ. ಮತ್ತೆ ಆರೋಪಿತನು ರಾತ್ರಿ 08:30 ಗಂಟೆ ಸುಮಾರಿಗೆ ಪಿರ್ಯಾದುದಾರರು ವಿಶ್ರಾಂತಿಯಲ್ಲಿರುವಾಗ ನಿಖಿಲ್‌ನು ನನಗೆ ಪದೇ ಪದೇ ಕರೆಯನ್ನು ಮಾಡಿ ನೀನು ಯಾಕೆ ನನ್ನ ಮನೆ ಹತ್ತಿರ ಬಂದಿದ್ದೀಯಾ, ನೀನು ಬಚ್ಚಾ ಬೀಟ್ ಪೊಲೀಸ್ ಈಗ ಬಾ ಎನ್ನುತ್ತಾ ಅವಾಚ್ಯ ಶಬ್ದದಿಂದ ಪಿರ್ಯಾದುದಾರರಿಗೆ ಜೀವ ಬೆದರಿಕೆ ಹಾಕಿರುತ್ತಾರೆ. ಪಿರ್ಯಾದುದಾರರಿಗೆ ಹಗಲು ಗ್ರಾಮ ಗಸ್ತು ಕರ್ತವ್ಯವನ್ನು ನಿರ್ವಹಿಸಲು ಬಿಡದೇ ತಡೆಯೊಡ್ಡಿ ಕರ್ತವ್ಯವನ್ನು ನಿರ್ವಹಿಸಲು ಅಡ್ಡಿಪಡಿಸಿ, ಅವಾಚ್ಯ ಶಬ್ದದಿಂದ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ ನಿಖಿಲ್ ಈತನ ವಿರುದ್ದ ಬ್ರಹ್ಮಾವರ ಪೊಲೀಸು ಠಾಣೆ ಅಪರಾಧ ಕ್ರಮಾಂಕ : ಕಲಂ 132, 351(2), 352 BNS ಕಲಂ. 132, 351(2), 352 BNSರಂತೆ ಪ್ರಕರಣ ದಾಖಲಿಸಿಕೊಳ್ಲಲಾಗಿದೆ.
ಆರೋಪಿ ನಿಖಿಲ್ ತಂದೆ: ಕೃಷ್ಣ ವಾಸ: ಬೇಳೂರು ಜೆಡ್ಡು, ಹಂದಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇತನನ್ನು ಈ ದಿನ ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಈತನ ವಿರುಧ್ದ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ ಹಾಗೂ ಒಂದು ಲೈಗಿಂಕ ಕಿರುಕುಳ ಪ್ರಕರಣಗಳು ದಾಖಲಾಗಿದ್ದು, ರೌಡಿ ಅಸಾಮಿಯಾಗಿರುತ್ತಾನೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now