ಸೋಷಿಯಲ್‌ ಮೀಡಿಯಾದಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡಿದ್ರೆ 1 ವರ್ಷ ಜಾಮೀನು ರಹಿತ ಜೈಲು !

ಸೋಷಿಯಲ್‌ ಮೀಡಿಯಾದಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡಿದ್ರೆ 1 ವರ್ಷ ಜಾಮೀನು ರಹಿತ ಜೈಲು !
0Shares

ಬೆಂಗಳೂರು : ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡುವವರ ಹಾವಳಿ ತಡೆಯುವ ಉದ್ದೇಶದಿಂದ ಇದೀಗ ಕಠಿಣ ಕಾಯ್ದೆಯೊಂದನ್ನು ಜಾರಿಗೆ ತರಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿ ಸಿಕ್ಕಿಬಿದ್ರೆ ಅಂತವರಿಗೆ 6 ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆ ನೀಡಲಾಗುವುದು. 1 ವರ್ಷದವರೆಗೆ ಜಾಮೀನು ರಹಿತ ಕಠಿಣ ಕಾಯ್ದೆಯನ್ನು 2024ರ ಜುಲೈ 1ರಿಂದ ಜಾರಿಗೆ ಬಂದಿರುವ ಐಟಿ ಕಾಯ್ದೆಗಳನ್ವಯ ಜಾರಿಗೆ ತರಲಾಗಿದೆ.

ಈ ಶಿಕ್ಷೆಯಾದ ಮೇಲೆ ಸೆಷನ್ಸ್‌ ಕೋರ್ಟ್, ಹೈಕೋರ್ಟ್ ತನಕ ಹೋದರೂ ಜಾಮೀನು ಸಿಗುವುದಿಲ್ಲ. ಕನಿಷ್ಠ 3 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ಇರುವ ಎರಡು ಸೆಕ್ಷನ್ ಜಾರಿ ಮಾಡಲಾಗಿದೆ. ಒಂದು ವೇಳೆ 1 ಲಕ್ಷ ರೂ. ದಂಡ ಕಟ್ಟದಿದ್ರೆ ದಂಡ ಕಟ್ಟುವ ತನಕ ಜೈಲುಶಿಕ್ಷೆ ಕಡ್ಡಾಯಗೊಳಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now