ಉಚ್ಚಿಲ ದಸರಾ ಮಹೋತ್ಸವ : ಮುಖ್ಯಮಂತ್ರಿಗಳಿಗೆ ಅಹ್ವಾನ

ಉಚ್ಚಿಲ ದಸರಾ ಮಹೋತ್ಸವ : ಮುಖ್ಯಮಂತ್ರಿಗಳಿಗೆ ಅಹ್ವಾನ
0Shares

ಉಡುಪಿ : ಜಿಲ್ಲೆಯ ಅತ್ಯಂತ ವಿಜೃಂಭಣೆಯ ಹಾಗೂ ಕರಾವಳಿಯ ಹೆಮ್ಮೆಯ ಸಾಂಸ್ಕೃತಿಕ ಉತ್ಸವವಾದ “ಉಚ್ಚಿಲ ದಸರಾ ಮಹೋತ್ಸವ”ಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರನ್ನು ಅಧಿಕೃತವಾಗಿ ಅಹ್ವಾನಿಸಲಾಗಿದೆ.

ಮೊಗವೀರ ಸಮಾಜದ ಹಿರಿಯ ಮುಖಂಡರಾದ ಜಿ. ಶಂಕರ್ ಹಾಗೂ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್ ಅವರ ನೇತೃತ್ವದಲ್ಲಿ, ಉದ್ಯಮಿ ಮತ್ತು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿಗಳಿಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿಗಳ ಗೌರವಾನ್ವಿತ ಉಪಸ್ಥಿತಿಯು ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹೋತ್ಸವದ ಗರಿಮೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂಬ ವಿಶ್ವಾಸವನ್ನು ಪ್ರಸಾದ್ ರಾಜ್ ಕಾಂಚನ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ನವರಾತ್ರಿಯ ಒಂಬತ್ತು ದಿನಗಳ ಕಾಲ ಉಚ್ಚಿಲದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಪವಿತ್ರ ಆವರಣದಲ್ಲಿ ಜರುಗಲಿರುವ ನವದುರ್ಗೆಯರ ವೈವಿಧ್ಯಮಯ ಅಲಂಕಾರ, ಅದ್ಧೂರಿ ವಿದ್ಯುತ್ ದೀಪಾಲಂಕಾರ ಹಾಗೂ ನಾಡಿನ ಸಾಂಸ್ಕೃತಿಕ ವೈಭವಗಳು ಇಡೀ ಕರಾವಳಿಯ ಸಾಂಸ್ಕೃತಿಕ ಸೊಬಗನ್ನು ಮತ್ತಷ್ಟು ಹೆಚ್ಚಿಸಲಿವೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now