ಬೆಂಗಳೂರು : ಡಜನ್ ಮೊಟ್ಟೆ ದರ ಗರಿಷ್ಠ ರೂ. 100ಕ್ಕೆ ಏರಿಕೆ

ಬೆಂಗಳೂರು : ಡಜನ್ ಮೊಟ್ಟೆ ದರ ಗರಿಷ್ಠ ರೂ. 100ಕ್ಕೆ ಏರಿಕೆ
0Shares

ಬೆಂಗಳೂರು: ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಡಜನ್ ಮೊಟ್ಟೆ ದರವು ₹100ಕ್ಕೆ ತಲುಪಿದೆ. ಇದು ಈವರೆಗಿನ ಗರಿಷ್ಠ ದರ.

ಪ್ರಸ್ತುತ ಬೆಂಗಳೂರಿನಲ್ಲಿ 100 ಮೊಟ್ಟೆ ದರ ₹740 ಇದ್ದರೆ, ಮೈಸೂರಿನಲ್ಲಿ ₹750ರಂತೆ ಮಾರಾಟವಾಗುತ್ತಿದೆ.

‘ದೇಶದ ಒಟ್ಟು ಮೊಟ್ಟೆ ಉತ್ಪಾದನೆ ಯಲ್ಲಿ ಶೇ 40ರಷ್ಟು ಉತ್ಪಾದನೆಯು ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿಆಗುತ್ತದೆ. ಅಲ್ಲಿ ತಾಪಮಾನ ಹೆಚ್ಚಳ ಕಂಡಿರುವುದರಿಂದ ಮೊಟ್ಟೆ ಉತ್ಪಾದನೆ ಇಳಿಕೆ ಆಗಿದೆ. ಅಲ್ಲದೆ, ಕೊಲ್ಲಿ ರಾಷ್ಟ್ರಗಳಲ್ಲಿ ಮೊಟ್ಟೆಗೆ ಬೇಡಿಕೆ ಹೆಚ್ಚಳವಾಗಿದೆ. ಇದು ಮೊಟ್ಟೆ ದರ ಏರಿಕೆಗೆ ಕಾರಣ’ ಎಂದು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿಯ (ಎನ್‌ಇಸಿಸಿ) ಮೈಸೂರು ವಿಭಾಗದ ಮಾರುಕಟ್ಟೆ ಅಭಿವೃದ್ಧಿ ಅಧಿಕಾರಿ ವಿ. ಶೇಷನಾರಾಯಣ ತಿಳಿಸಿದರು.

ಶಾಲೆಗಳು ಆರಂಭ ಆಗಿರುವುದರಿಂದ ಮಧ್ಯಾಹ್ನದ ಬಿಸಿಯೂಟಕ್ಕೆ ಮೊಟ್ಟೆ ನೀಡುತ್ತಿರುವುದು ಸಹ ದರ ಹೆಚ್ಚಳಕ್ಕೆ ಕಾರಣವಾಗಿದೆ. ಪ್ರಸ್ತುತ ರಿಟೇಲ್ ಮಾರುಕಟ್ಟೆಯಲ್ಲಿ ಪ್ರತಿ ಮೊಟ್ಟೆ ದರ ₹9ರವರೆಗೆ ಇದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now