ಕೊಂಕಣ ರೈಲ್ವೆ : ಸಲಹಾ ಸಮಿತಿಯ ಸಭೆಗೆ ಗಣೇಶ್ ಪುತ್ರನ್ ಗೆ ಬುಲಾವ್

ಕೊಂಕಣ ರೈಲ್ವೆ : ಸಲಹಾ ಸಮಿತಿಯ ಸಭೆಗೆ ಗಣೇಶ್ ಪುತ್ರನ್ ಗೆ ಬುಲಾವ್
0Shares

ಕುಂದಾಪುರ :ಕರಾವಳಿ ಕರ್ನಾಟಕದ ರೈಲ್ವೇ ಸಮಸ್ಯೆಗಳ ಕುರಿತು ಸಲಹಾ ಸೂಚನೆಯ ಕುರಿತು ಸಭೆಗೆ ಕೊಂಕಣ ರೈಲ್ವೆಯು ಗಣೇಶ್ ಪುತ್ರನ್ ರವರನ್ನು ಭಾಗವಹಿಸುವಂತೆ ಅಹ್ವಾನಿಸಿದ್ದು , ನವೀ ಮುಂಬಯಿಯಲ್ಲಿ ನಡೆಯಲಿರುವ ಈ ಸಭೆಯು ಮೂರನೇ ಹಣಕಾಸು ಮರು ವಿನ್ಯಾಸದ ಮಾತುಕಥೆಗಳ ನಡುವೆ ಕರ್ನಾಟಕಕ್ಕೆ ಮುಖ್ಯವೆನಿಸಿದೆ.

ಕರ್ನಾಟಕದ ಪ್ರಯಾಣಿಕ ಆಶೋತ್ತರಗಳನ್ನು ಸಮಿತಿಯ ಮುಂದಿಡಲು ಈಗಾಗಲೇ ಸಿದ್ದತೆಗಳನ್ನು ಪೂರ್ಣಗೊಳಿಸಲಾಗಿದ್ದು, ಕೊಂಕಣ ರೈಲ್ವೆಗೆ ತನ್ನದೇ ಆದ ಟರ್ಮಿನಲ್ , ಹೊಸ ರೈಲು ಸೇವೆಗಳು , ನಿಲ್ದಾಣ ಕಾಮಗಾರಿಗಳು , ಟಿಕೇಟ್ ದರ ಸೇರಿದಂತೆ ಹಲವು ವಿಷಯಗಳನ್ನು ಇಲಾಖೆಯ ಮುಂದಿಡುವುದಾಗಿ ಗಣೇಶ್ ಪುತ್ರನ್ ತಿಳಿಸಿದ್ದಾರೆ.

ಮುಖ್ಯವಾಗಿ ಬೆಂಗಳೂರು ರೈಲು ಸೇವೆಗಳಲ್ಲಿ ವಿಳಂಭ, ಮುಂಬಯಿ ರೈಲು ಸೇವೆಗಳ ಸಾದ್ಯತೆ , ಕೊಂಕಣ ರೈಲ್ವೇ ಸ್ಟೇಬಲ್ ಲೈನ್ ನಿರ್ಮಾಣ , ರೈಲುಗಳಲ್ಲಿ ಸುರಕ್ಷತಾ ಸೌಲಭ್ಯ ಸೇರಿ ಹಲವು ವಿಷಯಗಳ ಕುರಿತು ನಿಗಮದ ಗಮನ ಸೆಳೆಯಲಾಗುವುದು ಎಂದು ಗಣೇಶ್ ಪುತ್ರನ್ ತಿಳಿಸಿದ್ದಾರೆ.

ಬಹಿ ಮುಖ್ಯವಾಗಿ ಕೊಂಕಣ ರೈಲ್ವೆಯ ದ್ವಿಪಥೀಕರಣ ಕ್ಕೆ ಬೇಕಾಗ ಹಣಕಾಸು ನಿರ್ವಹಣೆ , ನಿಂತೇ ಹೊಗಿರುವ ಉಡುಪಿ ಅಮ್ರತ್ ಭಾರತ್ ರೈಲು ಯೋಜನೆ , ಕೊಂಕಣ ರೈಲು ನಿಲ್ದಾಣಗಳ ಮೂಲ ಸೌಕರ್ಯಗಳ ಬಗ್ಗೆ ಇಲಾಖೆಯ ಗಮನ ಸೆಳೆಯುವ ಪ್ರಯತ್ನಗಳಾಗ ಬೇಕಿದೆ.

ಮಹರಾಷ್ಟ್ರ ಗೋವಾ ಭಾಗದಲ್ಲಿ ನಿಗಮದ ಮುಖ್ಯಸ್ತರ ಸಭೆ ಆಗಾಗ ನಡೆಯುತಿದ್ದು ಕರ್ನಾಟಕದ ಜನಪ್ರತಿನಿದಿಗಳಿಂದ ಯಾವುದೇ ಸಾರ್ವಜನಿಕ ಕುಂದುಕೊರತೆ ಸಭೆ ನಡೆಯದ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆಯ ಗಮನ ಸೆಳೆಯಲು ಈ ಸಲಹಾ ಸಮಿತಿಯ ಸಭೆಯನ್ನೇ ಬಳಸುವುದು ಸೂಕ್ತವಾಗಿದೆ.
ಮೂರನೇ ಹಣಕಾಸು ಮರುವಿನ್ಯಾಸದಲ್ಲಿ ರಾಜ್ಯಕ್ಕೆ ಸಿಗುವ ಹಣಕಾಸು ಅತ್ಯಲ್ಪವಾಗಲಿದ್ದು , ಈ ಕುರಿತು ನಿಗಮದ ಮುಂದೆ ಬೇಡಿಕೆಗಳನ್ನು ಈಗಲೇ ಇಡ ಬೇಕಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now