
ತುಳು ಚಿತ್ರರಂಗದ ನಿರ್ದೇಶಕ, ನಟ ಹಾಗೂ ಬರಹಗಾರ ಸೂರಜ್ ಬೋಳಾರ್ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರ ಹಠಾತ್ ನಿಧನವು ಕರಾವಳಿ ಚಿತ್ರರಂಗ, ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ತೀವ್ರ ಆಘಾತವನ್ನುಂಟುಮಾಡಿದೆ. ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮ ವಿಭಿನ್ನ ನಿರ್ದೇಶನ ಶೈಲಿಯ ಮೂಲಕ ಕರಾವಳಿ ಚಿತ್ರರಂಗದಲ್ಲಿ ವಿಶೇಷ ಛಾಪು ಮೂಡಿಸಿದ್ದರು.
ತುಳು ಚಿತ್ರರಂಗದ ನಿರ್ದೇಶಕ, ನಟ ಹಾಗೂ ಬರಹಗಾರ ಸೂರಜ್ ಬೋಳಾರ್ (Suraj Bolar) ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರ ಹಠಾತ್ ನಿಧನವು ಕರಾವಳಿ ಚಿತ್ರರಂಗ, ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ತೀವ್ರ ಆಘಾತವನ್ನುಂಟುಮಾಡಿದೆ.
ದಿವಂಗತ ಆನಂದ ಬೋಳಾರ್ ಅವರ ಪುತ್ರರಾಗಿದ್ದ ಸೂರಜ್ ಬೋಳಾರ್ ಅವರು ನಿರ್ದೇಶಕ, ನಟ ಹಾಗೂ ಬರಹಗಾರರಾಗಿ ಗುರುತಿಸಿಕೊಂಡಿದ್ದರು. ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮ ವಿಭಿನ್ನ ನಿರ್ದೇಶನ ಶೈಲಿಯ ಮೂಲಕ ಕರಾವಳಿ ಚಿತ್ರರಂಗದಲ್ಲಿ ವಿಶೇಷ ಛಾಪು ಮೂಡಿಸಿದ್ದರು.
ವಿಶೇಷವಾಗಿ ‘ಪತ್ತೀಸ್ ಗ್ಯಾಂಗ್’ ಮತ್ತು ‘ರಾಹುಕಾಲ ಗುಳಿಗಕಾಲ’ ಎಂಬ ತುಳು ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಸಿನಿಮಾ ನಿರ್ದೇಶನದ ಜೊತೆಗೆ ರೇಡಿಯೋ ಹಾಗೂ ಮಾಧ್ಯಮ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದ ಅವರು ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now