
ಉದ್ಯಾವರ : ಉದ್ಯಾವರ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಉದ್ಯಾವರ ಇದರ ಲೋಕಾರ್ಪಣೆ ಕಾರ್ಯಕ್ರಮವು ನವೆಂಬರ್ 15 ಆದಿತ್ಯವಾರ ಬೆಳಿಗ್ಗೆ ಗಂಟೆ 10.30 ಕ್ಕೆ ಉದ್ಯಾವರ ಮೇಲ್ಪೇಟೆಯ ಪರಿಸರದಲ್ಲಿ ನಡೆಯಲಿದೆ.
ನೂತನ ಶಾಖೆಯನ್ನು ಮಾಜಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟನೆಗೊಳಿಸಲಿದ್ದು, ಉಡುಪಿ ಧರ್ಮ ಪ್ರಾಂತ್ಯದ ಮಾಜಿ ಕುಲಪತಿ ವಂ. ಫಾ. ಸ್ಟ್ಯಾನಿ ಲೋಬೊ ಆಶೀರ್ವಚನ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಧರ್ಮ ಗುರುಗಳಾದ ವo. ಫಾ. ಅನಿಲ್ ಡಿಸೋಜಾ ವಹಿಸಲಿದ್ದು, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕೋ ಆಪರೇಟಿವ್ ಯೂನಿಯನ್ ಲಿ. ಇದರ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕುಂದಾಪುರ ಬೆಳ್ವೆ ಚರ್ಚಿನ ಧರ್ಮ ಗುರುಗಳಾದ ವO. ಫಾ. ಲಿಯೋ ಪ್ರವೀಣ್ ಡಿಸೋಜಾ, ಉದ್ಯಾವರ ಚರ್ಚಿನ ಸಹಾಯಕ ಧರ್ಮ ಗುರುಗಳಾದ ವO. ಫಾ. ಸಂತೋಷ ಅಲ್ಮೇಡಾ, ಉದ್ಯಮಿ ಎಂಕೆ ಬಾಲರಾಜ್, ಉಡುಪಿ ಕೋ ಆಪರೇಟಿವ್ ಯೂನಿಯನ್ ಲಿ. ನ ಸಿಇಓ ಅನುಷಾ ಕೋಟ್ಯಾನ್, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಉದ್ಯಾವರ ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷ ಮೆಲ್ವಿನ್ ಅರನ್ನ, SCDCC ಬ್ಯಾಂಕ್ ಉಡುಪಿ ಇದರ ಮ್ಯಾನೇಜರ್ ಸುಧೀರ್ ಎಸ್ ಪಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ರೋಯ್ಸ್ ಫೆರ್ನಾಂಡಿಸ್ ತಿಳಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now