
ದಿನಾಂಕ 26.07.2026 ಆದಿತ್ಯವಾರ ರಂದು ಬೆಳಿಗ್ಗೆ 08.00 ಗಂಟೆಗೆ ಉಡುಪಿ ಶೋಕ ಮಾತೇ ಚರ್ಚಿನ ಕ್ಯಾಥೊಲಿಕ್ ಸಭಾ ಘಟಕದ ವತಿಯಿಂದ 2025 – 2026 ನೇ ಸಾಲಿನಲ್ಲಿ SSLC ಹಾಗೂ ದ್ವಿತೀಯ PUC ಅಂತಿಮ ಪರೀಕ್ಷೆಯಲ್ಲಿ 85% ಕ್ಕಿಂತ ಹೆಚ್ಚಿನ ಅಂಕ ಪಡೆದ ಪ್ರತಿಭಾನ್ವಿತ 19 ಮಂದಿ ವಿದ್ಯಾರ್ಥಿಗಳಿಗೆ ಶೋಕ ಮಾತೇ ಚರ್ಚಿನ ಪ್ರಧಾನ ಧರ್ಮ ಗುರುಗಳು ಹಾಗೂ ಕ್ಯಾಥೊಲಿಕ್ ಸಭಾ ಘಟಕದ ಆತ್ಮಿಯ ನಿರ್ದೇಶಕರಾದ ಅತೀ ವಂದನೀಯ ಫಾ. ಡೆನಿಸ್ ಡೇಸಾ ರವರು ಚರ್ಚಿನ ಸಹಾಯಕ ಧರ್ಮ ಗುರುಗಳಾದ ಫಾ. ಲಿಯೋ ಪ್ರವೀಣ್ ಡಿ ಸೋಜಾ, ಪ್ರಾಂಶುಪಾಲರಾದ ಫಾ. ವಿಜಯ್ ಡಿ ಸೋಜಾ ರವರ ಜೊತೆ ಕೂಡಿ ಉಡುಪಿ ಚರ್ಚಿನ 19 ಮಂದಿ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಪತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು, ಉಡುಪಿ ಘಟಕದ ಅಧ್ಯಕ್ಷರಾದ ಶ್ರೀ. ರೊಸಾರಿಯೋ ಡಿ ಸೋಜಾ ರವರು ಎಲ್ಲರನ್ನು ಸ್ವಾಗತಿಸಿದ್ದು, ಶ್ರೀಮತಿ. ಬೆನೆಡಿಕ್ಟ ಫೆರ್ನಾಂಡಿಸ್ ರವರು ಧಾನಿಗಳ ಹಾಗೂ ವಿಧ್ಯಾರ್ಥಿಗಳ ಹೆಸರನ್ನು ಓದಿ ಹೇಳಿದರು, ಉಡುಪಿ
ಘಟಕದ ಕಾರ್ಯದರ್ಶಿ ಶ್ರೀಮತಿ ಶೀಲಾ ಕ್ಯಾಸ್ಟಲಿನ ರವರು ಹಾಜರಿದ್ದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು, ಶ್ರೀಮತಿ. ಸಿಲ್ವಿಯಾ ಸುವರಿಸ್ ರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿರುತ್ತಾರೆ, ವಿಧ್ಯಾರ್ಥಿಗಳ ಪೋಷಕರು ಹಾಗೂ ಉಡುಪಿ ಕ್ಯಾಥೊಲಿಕ್ ಸಭಾ ಘಟಕದ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.




Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now