
ಶಿರ್ವ ಚರ್ಚಿನ ನೂತನ ಧರ್ಮ ಗುರುಗಳಾಗಿ ಫಾ. ಚಾರ್ಲ್ಸ್ ಮಿನೇಜಸ್ ಅಧಿಕಾರ ಸ್ವೀಕಾರ
ಶಿರ್ವ: ಮೇ 8 ಶಿರ್ವ ಆರೋಗ್ಯಮಾತ ದೇವಾಲಯದ ನೂತನ ಧರ್ಮ ಗುರುಗಳಾಗಿ ಫಾ. ಚಾರ್ಲ್ಸ್ ಮಿನೇಜಸ್ ರವರು ಶುಕ್ರವಾರ ಸಾಯಂಕಾಲ 5:00 ಗಂಟೆಗೆ ಅಧಿಕಾರ ಸ್ವೀಕರಿಸಿದರು.
ಶಿರ್ವ ಧರ್ಮ ಗುರುಗಳಾಗಿ ಸೇವೆ ಸಲ್ಲಿಸಿರುವ ಫಾ.ಡಾ. ಲೆಸ್ಲಿ ಡಿಸೋಜರವರು ಉಡುಪಿ ಪ್ರಾಂತ್ಯದ ಬಿಷಪ್ ಆಗಿ ನಿಯೋಜನೆಗೊಂಡ ನಂತರ ಶಿರ್ವ ಪ್ರಧಾನ ಧರ್ಮ ಗುರುಗಳ ಸ್ಥಾನಕ್ಕೆ ಇಂದು ಫಾ. ಚಾರ್ಲ್ಸ್ ಮಿನೇಜಸ್ ರವರು ಅಧಿಕಾರ ಸ್ವೀಕರಿಸಿದರು. ಇವರು ಉಡುಪಿಯಲ್ಲಿ ಪ್ರಧಾನ ಧರ್ಮಗುರುಗಳಾಗಿ 5.5 ವರ್ಷ ಸೇವೆಯನ್ನು ಸಲ್ಲಿಸಿರುತ್ತಾರೆ.
ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲರಾದ ಫಾ. ರೋಲ್ವಿನ್ ಅರನ್ನ, ಸಹಾಯಕ ಧರ್ಮ ಗುರುಗಳಾದ ಫಾ. ಅನಿಲ್ ರೊಡ್ರಿಗಸ್,
ಫಾ. ರೋಷನ್ ಡಿಸೋಜ,ಉಪಾಧ್ಯಕ್ಷರಾದ ಜುಲಿಯನ್ ರೊಡ್ರಿಗಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ ಆಯೋಗದ ಸಂಚಾಲಕಿ ಶಾಲಿನಿ ಕೋರ್ಡ, ಕಾನ್ವೆಂಟಿನ ಧರ್ಮ ಭಗಿನಿಯರು ಚರ್ಚಿನ ಪ್ರಧಾನ ದ್ವಾರದಲ್ಲಿ ಹೊಸ ಧರ್ಮಗುರುಗಳನ್ನು ಮಲ್ಲಿಗೆ ಹಾರ ತೊಡಿಸಿ ಸ್ವಾಗತಿಸಿದರು. ನಂತರ ದೇವಾಲಯದ ಒಳಗೆ ಬಿಷಪರ ಪ್ರತಿನಿಧಿಯಾದ ಉಡುಪಿ ಧರ್ಮ ಪ್ರಾಂತ್ಯದ ಚಾನ್ಸೀಲರ್ ಫಾ. ಸ್ಟೀವನ್ ಡಿಸೋಜ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಹುದ್ದೆಯನ್ನು ಹಸ್ತಾಂತರಿಸಿದರು. ಸಾವುದು ಅಮ್ಮನವರ ಚರ್ಚಿನ ಚರಿತ್ರೆಯನ್ನು ಉಪಾಧ್ಯಕ್ಷರಾದ ಜುಲಿಯನ್ ರೊಡ್ರಿಗಸ್ ವಾಚಿಸಿದರು. ಚರ್ಚಿನ ವತಿಯಿಂದ ಹೊಸ ಧರ್ಮಗುರುಗಳಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು. ಹೊಸ ಧರ್ಮ ಗುರುಗಳು ಮಾತನಾಡಿ ನನ್ನ ಹುಟ್ಟೂರು ಶಿರ್ವ ಹತ್ತಿರದ ಮಟ್ಟರು ನಾನು ನಿಮ್ಮವನೇ ನನಗೆ ಈ ಚರ್ಚು ಹೊಸದೇನಲ್ಲ ದೇವರು ಈ ಚರ್ಚಿನಲ್ಲಿ ಕೆಲಸ ಮಾಡಲು ಶಕ್ತಿ ಕೊಡಲಿ, ನಾನು ಶಕ್ತಿಮೀರಿ ಕೆಲಸ ಮಾಡುತ್ತೇನೆಂದು ಬರವಸೆ ನೀಡಿದರು. ಉಡುಪಿ ಹಾಗೂ ಶಿರ್ವಾದಿಂದ ಬಂದ ಭಕ್ತಾದಿಗಳಿಗೆ ಅಭಿನಂದನೆಗಳನ್ನು ನೀಡಿದರು.
ಈ ಕಾರ್ಯಕ್ರಮಕ್ಕೆ ಉಡುಪಿ ಧರ್ಮಪ್ರಾಂತ್ಯದ ಹಾಗೂ ಶಿರ್ವ ಧರ್ಮಪ್ರಾಂತ್ಯದ ಧರ್ಮ ಗುರುಗಳು ಹಾಗೂ ಸಾವಿರಾರು ಭಕ್ತಾದಿಗಳು ಭಾಗಿಯಾದರು.






ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now