ತ್ರಾಸಿ ಬಳಿ ಪ್ರವಾಸಿ ಬಸ್-ಟ್ಯಾಂಕರ್-ಲಾರಿ ಸರಣಿ ಅಪಘಾತ: 3 ವಿದ್ಯಾರ್ಥಿಗಳು ಮೃತ್ಯು

ತ್ರಾಸಿ ಬಳಿ ಪ್ರವಾಸಿ ಬಸ್-ಟ್ಯಾಂಕರ್-ಲಾರಿ ಸರಣಿ ಅಪಘಾತ: 3 ವಿದ್ಯಾರ್ಥಿಗಳು ಮೃತ್ಯು

0Shares

ದಿನಾಂಕ 29/04/2026 ರಂದು ಮದ್ಯಾಹ್ನ 1:30 ಗಂಟೆ ಸುಮಾರಿಗೆ ರಾ.ಹೆ 66ರ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ KL26D5959 ಬಸ್ ನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು ಪೂರ್ವ ಬದಿಯ ಮಣ್ಣು ರಸ್ತೆಯಲ್ಲಿ ನಿಂತಿದ್ದ MH 04 GR 4956ನೇ ಪೆಟ್ರೋಲಿಯಂ ಟ್ಯಾಂಕರ್‌ನ ಬಲಬದಿಯ ಮುಂಭಾಗಕ್ಕೆ ಡಿಕ್ಕಿ ಹೊಡೆದು ನಂತರ ನಿಯಂತ್ರಣ ಕಳೆದುಕೊಂಡು ಎದುರುಗಡೆ ಮಣ್ಣು ರಸ್ತೆಯಲ್ಲಿ ನಿಂತಿದ್ದ TG 29 T 2355ನೇ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಎಸಗಿರುತ್ತಾನೆ. ಸದ್ರಿ ಅಪಘಾತದಲ್ಲಿ ಬಸ್ಸಿನ ಮುಂಬದಿ ಸಂಪೂರ್ಣ ಜಖಂ ಆಗಿದ್ದು ನಂತರ ಬಸ್ಸಿನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಆರೈಕೆ ಮಾಡಿ ಗಾಯಗೊಂಡವರನ್ನು ಅಂಬುಲೆನ್ಸ್‌ ಮುಖಾಂತರ ಆಸ್ಪತ್ರೆಗೆ ಕಳುಹಿಸಿಕೊಟ್ಟಿರಲಾಗಿದೆ. ಗಾಯಗೊಂಡವರ ಪೈಕಿ ಮೂರು ಜನರಿಗೆ ತೀವೃ ತರದ ರಕ್ತತಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಅವರನ್ನು ಕೂಡಲೇ ಅಲ್ಲಿದ್ದವರು ಅಂಬುಲೆನ್ಸ್‌ ಮುಖಾಂತರ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುದಾಗಿದೆ. ಈ ಅಪಘಾತದ ಪರಿಣಾಮ ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪೆಟ್ರೋಲಿಯಂ ಟ್ಯಾಂಕರ್‌ನ ಮುಂಭಾಗದ ಬಲಬದಿ ಹಾಗೂ ಲಾರಿಯ ಹಿಂಭಾಗದ ಬಲಬದಿ ಜಖಂ ಗೊಂಡಿರುತ್ತದೆ. ಗಾಯಾಳುಗಳು ಕುಂದಾಪುರ ಆದರ್ಶ ಆಸ್ಪತ್ರೆ, ಮಣಿಪಾಲ ಆಸ್ಪತ್ರೆ, ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತು ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಅಪಘಾತದಲ್ಲಿ ತೀವೃವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 1) ರಘು @ ಉಮೇಶ, 2)ರಂಗನಾಥ ಮತ್ತು 3)ಹೇಮಂತ್‌ ಎಂಬವರು ಆಸ್ಪತ್ರೆಯಲ್ಲಿ ಮೃತಪಟ್ಟ ರುತ್ತಾರೆ. ಈ ಅಪಘಾತಕ್ಕೆ KL 26 D 5959 ಬಸ್ಸಿನ ಚಾಲಕ ಮಂಜುನಾಥನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದ್ದು. ಚಾಲಕನ ಮೇಲೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 22/2026 ಕಲಂ: 281,125(a), 106 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಸದ್ರಿ ಬಸ್ಸ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಕುವೆಂಪು ಯೂನಿವರ್‌ ಸಿಟಿಯ ರಂಬಾಪುರಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಗಳು ಪ್ರವಾಸದ ನಿಮಿತ್ತ ದಿನಾಂಕ 26.04.2026 ರಂದು ಹೊರಟಿದ್ದು, ದಾಂಡೇಲಿ, ಹೊನ್ನಾವರ ಕಡೆಯಿಂದ ಪ್ರವಾಸ ಮುಗಿಸಿ, ಈ ದಿನ ತ್ರಾಸಿ ಮರವಂತೆ ಬೀಚ್‌ ಬಳಿ ಬರುವಾಗ ಸದ್ರಿ ಘಟನೆ ನಡೆದಿರುವುದಾಗಿದೆ. ಸದ್ರಿ ಬಸ್ಸ್‌ನಲ್ಲಿ ಕುವೆಂಪು ಯೂನಿವರ್‌ ಸಿಟಿಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರ ಸಹಾಯಕ ಸಿಬ್ಬಂದಿಗಳು ಹಾಗೂ ಬಸ್ಸ್‌ನ ಹೆಚ್ಚುವರಿ ಚಾಲಕ, ಕ್ಲೀನರ್‌ ಪ್ರಯಾಣ ಮಾಡುತ್ತಿರುವುದಾಗಿದೆ.

ಸದ್ರಿ ಘಟನ ಸ್ಥಳಕ್ಕೆ ಹರಿರಾಮ್‌ ಶಂಕರ್‌, ಪೊಲೀಸ್‌ ಅಧೀಕ್ಷಕರು, ಉಡುಪಿ ಜಿಲ್ಲೆ, ಹೆಚ್‌ ಡಿ ಕುಲಕರ್ಣಿ, ಪೋಲೀಸ್ ಉಪಾಧೀಕ್ಷಕರು ಕುಂದಾಪುರ ಹಾಗೂ ಶಿವಕುಮಾರ ಬಿ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು, ಗಂಗೊಳ್ಳಿ ಪೊಲೀಸ್ ಠಾಣಾ ಪಿ ಎಸ್ ಐ ರವರಾದ ಶ್ರೀ ಪವನ್‌ ನಾಯಕ್ (ಕಾ & ಸು) ಹಾಗೂ ಸುದರ್ಶನ್‌ ಬಿ.ಎನ್‌ (ತನಿಖೆ) ಭೇಟಿ ನೀಡಿರುತ್ತಾರೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now