
ಉಡುಪಿ: ಅಂಬಾಗಿಲು ರಸ್ತೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಶಾಖೆಯನ್ನು ಇಂದು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಮುರಳಿಧರ ಕುಂಜಿಬೆಟ್ಟು ಪ್ರಾರ್ಥನೆ ನೆರವೇರಿಸಿದರು. ಶಾಖಾ ವ್ಯವಸ್ಥಾಪಕ ಶ್ರೀ ಬಾಲಚಂದ್ರ ಹೆಬ್ಬಾರ್ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು.
SBI ಬೆಂಗಳೂರು ವೃತ್ತದ ನೆಟ್ವರ್ಕ್-3 ನ ಜನರಲ್ ಮ್ಯಾನೇಜರ್ ಶ್ರೀ ಸಂಜಯ್ ಕುಮಾರ್ ಝಾ ಅವರು ದೀಪ ಬೆಳಗಿಸಿ ಶಾಖೆಯನ್ನು ಉದ್ಘಾಟಿಸಿದರು. ಮಾತನಾಡಿದ ಅವರು, “ಗ್ರಾಹಕರೆಲ್ಲರೂ ಈ ನೂತನ ಶಾಖೆಯ ಪ್ರಯೋಜನವನ್ನು ಹೆಚ್ಚಿನ ರೀತಿಯಲ್ಲಿ ಪಡೆದುಕೊಳ್ಳಬೇಕು” ಎಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ SBI ಮಂಗಳೂರು ಆಡಳಿತ ಕಚೇರಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಶ್ರೀ ಕೃಷ್ಣ ಮೋಹನ್ ಮುಚರ್ಲ ಅವರು ಶಾಖೆಯ ಹೆಸರನ್ನು ಅನಾವರಣಗೊಳಿಸಿದರು.
ಉಡುಪಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ಶ್ರೀ ಬಿ. ಪ್ರಕಾಶ್ ಅಡಿಗ ಮಾತನಾಡಿ, “ಈ ನೂತನ ಶಾಖೆ ಅಂಬಾಗಿಲು ಮತ್ತು ಸುತ್ತಮುತ್ತಲಿನ ನಿವಾಸಿಗಳಿಗೆ ಆಧುನಿಕ ಬ್ಯಾಂಕಿಂಗ್ ಸೇವೆಗಳನ್ನು ಹತ್ತಿರದಿಂದ, ವೇಗವಾಗಿ ಮತ್ತು ಸುರಕ್ಷಿತವಾಗಿ ಒದಗಿಸಲಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಕೀಳಂಜೆ ಶ್ರೀ ಕೃಷ್ಣರಾಜ ಭಟ್ಅನಿಲ್ ಕುಮಾರ್, ಅಭಯಲಾಲ್ ದಾಸ್, ಜಗದೀಶ್ ಕಾಮತ್, ಶ್ರೀನಿವಾಸ MV, ಪ್ರಾದೇಶಿಕ ಕಚೇರಿಯ ಇತರ ಅಧಿಕಾರಿಗಳು, ಹತ್ತಿರದ ಶಾಖೆಯ ಸಿಬ್ಬಂದಿಗಳು, ಸ್ಥಳೀಯ ಗಣ್ಯರು, ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹಿರಿಯ ಗ್ರಾಹಕರಾದ ವಾಸುದೇವ, ಮಾಲಕರಾದ ರೋಹಿಣಿ ಕಿಣಿ ಅವರನ್ನು ಗೌರವಿಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲಾ ಅತಿಥಿಗಳು ಮತ್ತು ಗ್ರಾಹಕರಿಗೆ ಬ್ಯಾಂಕ್ ವತಿಯಿಂದ ಧನ್ಯವಾದ ಸಲ್ಲಿಸಲಾಯಿತು. ಶ್ರೀಮತಿ ಮನಿಷಾ ಕಾರ್ಯಕ್ರಮ ನಿರ್ವಹಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now