
ಉಡುಪಿ ಹಾಗೂ ಮಂಗಳೂರು ಮೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಯ ಸಮಾಂತರ ಲೈಸನ್ಸ್ ಅನ್ನು ಟಾಟಾ ಡಿಸ್ಟ್ರಿಬ್ಯೂಶನ್ ಕಂಪೆನಿಗೆ ನೀಡುವ ಪ್ರಸ್ತಾವ ವಿರೋಧಿಸಿ ನಮ್ಮ ಕರ್ನಾಟಕ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಉಸ್ತುವಾರಿಯಾದ ಸುಜಯ್ ಪೂಜಾರಿ ಆಗ್ರಹ ಮಾಡಿದರೆ .
ಮೆಸ್ಕಾಂ ಸರಕಾರದ ಅಧೀನದಲ್ಲೇ ಕಾರ್ಯನಿರ್ವ ಹಿಸಬೇಕು, ಖಾಸಗೀ ಕರಣ ಬೇಡ. ಈಗಾಗಲೇ ಈ ಕುರಿತು ವಿದ್ಯುತ್ ವಿತರಣೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಜಿಲ್ಲಾ ನಮ್ಮ ಕರ್ನಾಟಕ ಸೇನಾ ವತಿಯಿಂದ ಈ ಪ್ರಸ್ತಾವ ವಿರೋಧಿಸಿ ಆಕ್ಷೇಪಣೆ ಸಲ್ಲಿಸಲು ತಮ್ಮಲ್ಲಿ ಕೋರುತ್ತಿರುತ್ತೇವೆ ಎಂದರು.
ಸಮಾಂತರ ಲೈಸನ್ಸ್ ಅರ್ಜಿಯನ್ನು ಟಾಟಾ ಕಂಪೆನಿ
ಆಯೋಗಕ್ಕೆ ಸಲ್ಲಿಸಿದೆ, ಅವರಿಗೆ ಅನುಮತಿ ಸಿಕ್ಕಿದರೆ ಮಂಗಳೂರು, ಉಳ್ಳಾಲ, ಉಡುಪಿ, ಶಿವಮೊಗ್ಗ ಹೀಗೆ ನಗರ ಪ್ರದೇಶದಲ್ಲಿ ವಿತರಣೆ ಉಸ್ತು ವಾರಿ ಪಡೆಯಲಿದ್ದಾರೆ. ಇದರಿಂದ ಲಾಭದಾಯಕ ಪ್ರದೇಶಗಳು ಅವರ ಪಾಲಾಗಲಿದ್ದು, ಹೆಚ್ಚು ಆದಾಯ ಸಿಗದಂತಹ ಗ್ರಾಮೀಣ ಭಾಗ ಮೆಸ್ಕಾಂ ಬಳಿ ಉಳಿಯಲಿದೆ, ಇದರಿಂದಾಗಿ ಹಳ್ಳಿ ಪ್ರದೇಶದಲ್ಲಿ ಗುಣಮಟ್ಟದ ಸೇವೆ ನೀಡಲು ಮೆಸ್ಕಾಂ ಪರದಾಡುವ ಪರಿಸ್ಥಿತಿ ಬರಲಿದೆ. ಹಾಗಾಗಿ ಪ್ರಸ್ತಾವಕ್ಕೆ ವಿರೋಧ ಮಾಡಬೇಕಾಗಿದೆ ಎಂದರು
ಖಾಸಗೀಕರಣ ಪ್ರಸ್ತಾವವನ್ನು ವಿರೋಧಿಸಿದರು. ಮುಂದಿನ ದಿನಗಳಲ್ಲಿ ಯಾವುದೇ ಉಲ್ಲಂಘನೆ ಮಾಡಿದರೆ ಮೆಸ್ಕಾಂ ಸರ್ಕಾರ ಅಧೀನದಲ್ಲಿ ಕಾರ್ಯನಿರ್ವಹಿಸಬೇಕು.ಖಾಸಗಿಕರಣ ಬೇಡವೇ ಬೇಡ ಒಂದು ಪಕ್ಷ ಖಾಸಗಿಕರಣ ಮಾಡಿದ್ದಲ್ಲಿ ಈಗ ಇರುವ ಉದ್ಯೋಗಿಗಳಿಗೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಆಗೋದ್ರಲ್ಲಿ ಯಾವುದೇ ಸಂಶಯವಿಲ್ಲ ಹೊಸ ಉದ್ಯೋಗಿ ಗಳನ್ನು ಆಯ್ಕೆ ಮಾಡುವಾಗ ನಮ್ಮ ಕನ್ನಡ ತಾಯಿ ಮಕ್ಕಳಿಗೆ ದೊಡ್ಡ ಹೊಡೆತ ಬಿದ್ದು ಆಮೇಲೆ ಅವರ ಕಪಿಮುಷ್ಠಿಯಲ್ಲಿ ಇರಬೇಕಾಗಿತ್ತು. ನಿಯಂತ್ರಣ ಆಯೋಗಕ್ಕೆ ಮುಂದಿನ ದಿನಗಳಲ್ಲಿ ಇದನ್ನು ವಿರೋಧಿಸಿ ಪ್ರಸ್ತಾವನೆಯನ್ನು ಸಲ್ಲಿಸುತ್ತೇವೆ ಯಾವುದೇ ಉಲ್ಲಂಘನೆ ಮಾಡಿದಲ್ಲಿ ನಮ್ಮ ಕರ್ನಾಟಕ ಸೇನೆ ರಾಜ್ಯಾದ್ಯಂತ ಮೆಸ್ಕಾಂ ಶಾಖೆಯ ಎದುರುಗಡೆ ಬೃಹತ್ ಪ್ರತಿಭಟನೆ ಮಾಡೋದಲ್ಲದೆ ಅದಕ್ಕೂ ಕೂಡ ಸರಿಯಾದ ಸ್ಪಂದಿಸದಿದ್ದಲ್ಲಿ ರಾಜ್ಯಾದ್ಯಂತ ಜಿಲ್ಲಾ ಕಚೇರಿಗಳಲ್ಲಿ ಹೋರಾಟವನ್ನು ಮಾಡುವುದಾಗಿ ಎಚ್ಚರಿಕೆ ಸಂದೇಶವನ್ನು ಸರ್ಕಾರಕ್ಕೆ ನಮ್ಮ ಕರ್ನಾಟಕ ಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಯಾವರು ಆಗ್ರಹಿಸುತ್ತೇವೆ
ನಮ್ಮ ವರದಿಗಾರರು
ಸ್ಟೀವನ್ ಕುಲಾಸೋ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now