ಕವಯಿತ್ರಿ ಅನಿತಾ ಪಿ.ತಾಕೊಡೆಗೆ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ ಪ್ರದಾನ

ಕವಯಿತ್ರಿ ಅನಿತಾ ಪಿ.ತಾಕೊಡೆಗೆ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ ಪ್ರದಾನ

0Shares

ಮುಂಬಯಿ, ಏ.೧೫: ಕರ್ನಾಟಕ ಲೇಖಕಿಯರ ಸಂಘವು ಬೆಂಗಳೂರು ಅಲ್ಲಿನ ಕನ್ನಡ ಭವನದ ಕನ್ನಡ, ಸಂಸ್ಕೃತಿ ಇಲಾಖೆಯ ನಯನ ಸಭಾಂಗಣದಲ್ಲಿ ಕಳೆದ ಗುರುವಾರ (ಏ.೦೯) ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಂಬಯಿಯ ಕವಯಿತ್ರಿ-ಲೇಖಕಿ ಅನಿತಾ ಪಿ.ತಾಕೊಡೆ ಅವರಿಗೆ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ ಪ್ರದಾನಿಸಿ ಗೌರವಿಸಿತು.

ಅನಿತಾ ಪಿ.ತಾಕೊಡೆ ರಚಿತ ಪ್ರಶಸ್ತಿ ಪಡೆದ ಕೃತಿ ಮೇಣಕ್ಕಂಟಿದ ಬತ್ತಿ ಮುಂಬಯಿ ಅಲ್ಲಿನ ತಾಕೊಡೆ ಎಂಟರ್‌ಪ್ರೈಸಸ್ ಮೂಲಕ ಪ್ರಕಟವಾದ ಪ್ರಥಮ ಕೃತಿಯಾಗಿದೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ| ಎಸ್.ಜಿ ಸಿದ್ದರಾಮಯ್ಯ ಹಾಗೂ ಪ್ರಸಿದ್ಧ ಪತ್ರಕರ್ತ, ಅವಧಿ ಡಾಟ್‌ಕಾಮ್ ಇದರ ಜಿ.ಎನ್ ಮೋಹನ್ ಅವರು ಅನಿತಾ ತಾಕೊಡೆ ಸಹಿತ ಪುರಸ್ಕೃತ ಲೇಖಕಿಯರಿಗೆ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು. ಕಲೇಸಂ ಅಧ್ಯಕ್ಷೆ ಡಾ| ಆರ್ ಸುನಂದಮ್ಮ, ಸಾಹಿತಿ ಡಾ| ಎನ್.ಗಾಯತ್ರಿ, ಸಮಾ ಸತೀಶ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now