ಗಂಗೊಳ್ಳಿ ಕೊಸೆಸಾಂವ್ (ಅಮಲೋದ್ಭವಿ) ಮಾತೆ ಚರ್ಚ್ ನಲ್ಲಿ ಮಕ್ಕಳಿಂದ ” ಶಿಲುಬೆಯ ದಾರಿ” ಯ ನೈಜ ಪ್ರದರ್ಶನ.

ಗಂಗೊಳ್ಳಿ ಕೊಸೆಸಾಂವ್ (ಅಮಲೋದ್ಭವಿ) ಮಾತೆ ಚರ್ಚ್ ನಲ್ಲಿ ಮಕ್ಕಳಿಂದ ” ಶಿಲುಬೆಯ ದಾರಿ” ಯ ನೈಜ ಪ್ರದರ್ಶನ.

0Shares

2025 ನೇ ವರ್ಷದಲ್ಲಿ, ಜುಬಿಲಿ ವರ್ಷದ ಪ್ರಯುಕ್ತ ಗಂಗೊಳ್ಳಿಯ ಕೊಸೆಸಾಂವ್ ಮಾತೆಯ ಚರ್ಚಿನಲ್ಲಿ ಶ್ರೀ ಸಾಮಾನ್ಯರಿಂದ “ಶುಭ ಶುಕ್ರವಾರ”ದಂದು ಬಹು ಯಶಸ್ವಿಯಾಗಿ , ಜನರ ಹೃದಯವನ್ನು ತಟ್ಟಿ, ಅಪಾರ ಪ್ರಶಂಸೆಯೊಂದಿಗೆ “ಶಿಲುಬೆಯ ದಾರಿ” ಪ್ರದರ್ಶನಗೊಂಡಿತ್ತು.

ಹಿಂದಿನ ವರ್ಷದ ಪ್ರದರ್ಶನ ಹಾಗೂ ಕಳೆದ ನೂರಾರು ವರ್ಷಗಳಿಂದ ಗಂಗೊಳ್ಳಿ ಚರ್ಚ್ ನಲ್ಲಿ ಪ್ರದರ್ಶನ ಗೊಳ್ಳುತ್ತಿರುವಂತಹ ಯೇಸು ಕ್ರಿಸ್ತರ ಕಷ್ಟಗಳ ಚಿತ್ರಣ (ಪಾಶಾಂವ್) ದ ಪ್ರೇರಣೆ ಪಡೆದು,
ಪ್ರಸ್ತುತ ವರ್ಷ (2026) ಗಂಗೊಳ್ಳಿಯ ಕೊಸೆಸಾಂವ್ ಮಾತೆಯ ಚರ್ಚಿನಲ್ಲಿ ದಿನಾಂಕ 03 ಏಪ್ರಿಲ್ 2026 ರ ಶುಭ ಶುಕ್ರವಾರ ( ಗುಡ್ ಫ್ರೈಡೆ) ದಂದು ಬೆಳಿಗ್ಗೆ 8.00 ಗಂಟೆಗೆ “ಮಕ್ಕಳಿಂದ ನೈಜ ಶಿಲುಬೆಯ ದಾರಿ” ಪ್ರದರ್ಶನಗೊಳ್ಳಲಿರುವುದು.

ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜ ರವರ ಮಾರ್ಗದರ್ಶನದಲ್ಲಿ 6 ರಿಂದ 12 ನೇ ವಯಸ್ಸಿನ 60 ಮಕ್ಕಳು ದಿವಂಗತ ಧರ್ಮಗುರು ವಂದನೀಯ ವಲೇರಿಯನ್ ಮೆಂಡೊನ್ಸಾರವರು ಬರೆದ “ಶಿಲುಬೆಯ ದಾರಿ” ಯ ನೈಜ ಪ್ರದರ್ಶನವನ್ನು ಶ್ರೀ ಎಲ್ರೋಯ್ ಕಿರನ್ ಕ್ರಾಸ್ಟೊ, ಶ್ರೀ ಓವಿನ್ ರೆಬೆಲ್ಲೊ ಹಾಗೂ ಶ್ರೀ ರೋಶನ್ ಲೋಬೊರವರ ನಿರ್ದೇಶನದಲ್ಲಿ ನೀಡಲಿದ್ದಾರೆ.

ಅದ್ಭುತ ನಟನಾ ಕೌಶಲ್ಯದೊಂದಿಗೆ ರೂಪುಗೊಂಡಿರುವ ಈ ಶಿಲುಬೆಯ ದಾರಿಯ ಪ್ರದರ್ಶನವು ಗಂಗೊಳ್ಳಿ ಕಾರ್ಮೆಲ್ ಕಾನ್ವೆಂಟಿನ ಧರ್ಮ ಭಗಿನಿಯರು, ಚರ್ಚಿನ ಗಾಯನ ಮಂಡಳಿ, ಚರ್ಚಿನ ಪಾಶಾಂವ್ ಸಮಿತಿ ಹಾಗೂ ಶ್ರೀಸಾಮಾನ್ಯರ ಸಹಕಾರ ದೊಂದಿಗೆ ನೇರವೇರಲಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now