
ಭೂಗತ ಪಾತಕಿ ಹೇಮಂತ ಪೂಜಾರಿ ಈತನು ಉಡುಪಿ ಜಿಲ್ಲೆಯ, ಪಡುಬಿದ್ರೆ, ಶಿರ್ವಾ, ಕಾಪು, ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯವಹಾರ ಮಾಡಿಕೊಂಡಿರುವ ಉದ್ದಿಮೆದಾರರನ್ನು ಹಾಗೂ ಗಣ್ಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಅವರಿಗೆ ಕಾಲ್ ಮಾಡಿ, ಕೋಟ್ಯಾಂತರ ರೂಪಾಯಿಗಳಿಗೆ ಬೇಡಿಕೆ ಇಟ್ಟು, ಕೊಡದೆ ಇದ್ದಲ್ಲಿ, ಕೊಲೆಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ 5, ಶಿರ್ವ ಪೊಲೀಸ್ ಠಾಣೆಯಲ್ಲಿ 1, ಕಾಪು ಪೊಲೀಸ್ ಠಾಣೆಯಲ್ಲಿ 1 ಮತ್ತು ಮಣಿಪಾಲ ಪೊಲೀಸ್ ಠಾಣೆಯಲ್ಲಿ 1. ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಸದ್ರಿ ಪ್ರಕರಣಗಳಲ್ಲಿ ತನಿಖೆಯನ್ನು ಮುಂದುವರಿಸಿ, ಭೂಗತ ಪಾತಕಿ ಹೇಮಂತ ಪೂಜಾರಿ ಈತನಿಗೆ ಸದ್ರಿ ಪ್ರರಕಣಗಳಲ್ಲಿ ನೊಂದ ಉದ್ದಿಮೆದಾರರ ಹಾಗೂ ಗಣ್ಯ ವ್ಯಕ್ತಿಗಳ ಮೊಬೈಲ್ ನಂಬ್ರಗಳನ್ನು ಹಾಗೂ ಇತರ ಮಾಹಿತಿಗಳನ್ನು ನೀಡಿ ಕೃತ್ಯದಲ್ಲಿ ಭಾಗಿಯಾದ ಸುರೇಶ್ ಅಮೀನ್ ಪ್ರಾಯ 38 ವರ್ಷ ತಂದೆ: ದಿ. ಭೋಜ ಅಮೀನ್ ವಾಸ: ಬಟ್ರತೋಟ ಹೌಸ್, ಎರ್ಮಾಳು ಬಡಾ ಗ್ರಾಮ, ಕಾಪು ತಾಲೂಕು ಈತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ದಸ್ತಗಿರಿ ಮಾಡಿದ್ದು, ಆರೋಪಿ ಸುರೇಶ್ ಅಮೀನ್ ಹಾಗೂ ಹೇಮಂತ ಪೂಜಾರಿ ಇವರು ದಾಖಲಾದ ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ನೊಂದ ಉದ್ದಿಮೆದಾರರೊಬ್ಬರು ಬೇಡಿಕೆ ಇಟ್ಟ ಹಣವನ್ನು ಕೊಡದೆ ಇದ್ದುದರಿಂದ, ಹಾಗೂ ಪೋನ್ ಕಾಲ್ ರಿಸೀವ್ ಮಾಡದೆ ಇದ್ದುದರಿಂದ ಅವರನ್ನು ಕೊಲೆ ಮಾಡುವ ಬಗ್ಗೆ ಒಳಸಂಚು ರೂಪಿಸಿದ್ದು ತಾಂತ್ರಿಕ ಸಾಕ್ಷ್ಯದಿಂದ ತಿಳಿದುಬಂದಿದ್ದು, ಸದ್ರಿ ಕೃತ್ಯಕ್ಕೆ ಸಂಬಂಧಪಟ್ಟಂತೆ ಭೂಗತ ಪಾತಕಿ ಹೇಮಂತ ಪೂಜಾರಿ ಈತನು ಆರೋಪಿ ಸುರೇಶ್ ಅಮೀನ್ ಈತನಿಗೆ ಕಳುಹಿಸಿಕೊಟ್ಟ ಹಣ ರೂ 5 ಲಕ್ಷದಲ್ಲಿ ಆರೋಪಿ ಸುರೇಶ್ ಅಮೀನ್ ಖರ್ಚು ಮಾಡಿ ಉಳಿದ 4,13,000/- ರೂವನ್ನು ಸ್ವಾದೀನಪಡಿಸಿಕೊಂಡು ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಂತರ ವಾಪಾಸು ಪೊಲೀಸ್ ಅಭಿರಕ್ಷೆಗೆ ಪಡೆದು ತನಿಖೆ ಮುಂದುವರಿಸಿದ್ದು, ಈ ಪ್ರಕರಣದಲ್ಲಿ ಇನ್ನಷ್ಟು ವ್ಯಕ್ತಿಗಳು ಬಾಗಿಯಾಗಿರುವ ಸಾದ್ಯತೆಗಳಿರುವುದರಿಂದ, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now