
“ಭಂಡಾರಿ ಸಮುದಾಯದ ಅಸ್ಮಿತೆ ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಪರಿವರ್ತನೆಯ ಕುರಿತು ಸಂಶೋಧನೆ: ಪ್ರೊ.ಪ್ರವೀಣ್ ಭಂಡಾರಿಯವರಿಗೆ ಪಿಎಚ್.ಡಿ.”
ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆಯ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ. ಪ್ರವೀಣ್ ಭಂಡಾರಿ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ.) ಪದವಿಯನ್ನು ಪಡೆದಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷರಾಗಿರುವ ಡಾ. ಸಿ. ಎಂ. ರಾಜಪ್ರವೀಣ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “Identity, Social Justice and Political Transformation – Study of Bhandary Community in Dakshina Kannada and Udupi Districts” ಎಂಬ ವಿಷಯದ ಮೇಲಿನ ಸಂಶೋಧನೆಗೆ ಅವರಿಗೆ ಪಿಎಚ್.ಡಿ. ಪದವಿ ಲಭಿಸಿದೆ.ಮೂಲತಃ ಉಡುಪಿ ಜಿಲ್ಲೆಯ ಹಾವಂಜೆ ಗ್ರಾಮದ ಕೊಳಲಗಿರಿ ಯವರಾದ
ಪ್ರೊ. ಪ್ರವೀಣ್ ಭಂಡಾರಿ ಯವರು ಕೊಳಲಗಿರಿ ಸಂತ ಕ್ಸೆವಿಯರ್ ನಲ್ಲಿ ಪ್ರಾಥಮಿಕ, ಸರಕಾರಿ ಪ್ರೌಢ ಶಾಲೆ ಉಪ್ಪೂರು ನಲ್ಲಿ ಪ್ರೌಢ, ಸರಕಾರಿ ಪದವಿ ಪೂರ್ವ ಕಾಲೇಜು ಕೆಮ್ಮಣ್ಣು ಪಿ ಯು ಸಿ, ಸರಕಾರಿ ಪದವಿ ಕಾಲೇಜು ಉಡುಪಿ ಇಲ್ಲಿ ಪದವಿ ಶಿಕ್ಷಣ ಪಡೆದು ಎಂ.ಎ ಪದವಿ ಮಂಗಳೂರು ವಿಶ್ವವಿದ್ಯಾಲಯ, ಎಂ. ಫಿಲ್, ಬಿ. ಎಡ್, ಕೆ. ಸೆಟ್ ಪದವಿ /ಅರ್ಹತೆ ಪಡೆದು ತಮ್ಮ ಉಪನ್ಯಾಸಕ ವೃತ್ತಿ ಜೀವನವನ್ನು ಶ್ರೀ ಮಹಾವೀರ ಕಾಲೇಜು ಮೂಡಬಿದ್ರಿಯಲ್ಲಿ ಪ್ರಾರಂಭಿಸಿ, ಆಳ್ವಾಸ್ ಕಾಲೇಜು ಮೂಡಬಿದ್ರಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಕರ್ನಾಟಕ ಸರಕಾರದಿಂದ ಕಾಲೇಜು ಶಿಕ್ಷಣ ಇಲಾಖೆಯ ಸೇವೆಗೆ ನೇಮಕಗೊಂಡು ಭದ್ರಾವತಿಯ ಹೆಬ್ಬೂರು ಮಹಾವಿದ್ಯಾಲಯ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುತ್ತಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now