ಶಿವಮೊಗ್ಗ: ಯುವ ಇಂಜಿನಿಯರ್ ನೇಣಿಗೆ ಶರಣು

ಶಿವಮೊಗ್ಗ: ಯುವ ಇಂಜಿನಿಯರ್ ನೇಣಿಗೆ ಶರಣು
0Shares

ಶಿವಮೊಗ್ಗ: ಯುವ ಇಂಜಿನಿಯರ್ ಒಬ್ಬರು ಮನೆಯಲ್ಲಿ ನೇಣು ಬಿಗಿದುಕೊಂದಿರುವ ಘಟನೆ ಶಿಕಾರಿಪುರ ಪಟ್ಟಣದ ಚನ್ನಕೇಶವ ನಗರದಲ್ಲಿ ನಡೆದಿದೆ.

ಅನ್ವಿತ್ ಸಾಗರ್ (27) ಇಂಜಿನಿಯರ್. ಇವರು ಶಿವ ಸಹಕಾರಿ ಬ್ಯಾಂಕಿನ ನಿರ್ದೇಶಕ ಗಣಪತಿ ಅವರ ಪುತ್ರರಾಗಿದ್ದಾರೆ. ಅನ್ವಿತ್ ಅವರು ಶನಿವಾರವಷ್ಟೇ ತಮ್ಮ ಪೋಷಕರೊಂದಿಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಮನೆಗೆ ವಾಪಸಾಗಿದ್ದರು. ಬಳಿಕ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗಿದೆ.

ಅವರ ಸಾವಿಗೆ ಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಅವರು ದಿಢೀರನೆ ಇಂತಹ ನಿರ್ಧಾರ ಕೈಗೊಂಡಿರುವುದು ಕುಟುಂಬಸ್ಥರಿಗೆ ಆಘಾತ ಉಂಟುಮಾಡಿದೆ.

ಅನ್ವಿತ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ್ ಗೌಡ, ಶಿವ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮಹದೇವ ಪಾಟೀಲ್ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸಂತಾಪ ಸೂಚಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now