
ತಡೆಗೋಡೆ ಇಲ್ಲದೆ ರಸ್ತೆ ಬದಿಯ ಗುಂಡಿಗೆ ಬಿದ್ದ ವಾಹನ; ಪ್ರಾಣಾಪಾಯದಿಂದ ಪಾರು
ಸಿದ್ದಾಪುರ: ತಡೆಗೋಡೆ ನಿರ್ಮಿಸಲು ಗ್ರಾ.ಪಂ ನಿರ್ಲಕ್ಷ್ಯ ಹಾಗೂ ಚಾಲಕನ ಅಜಾಗರೂಕತೆಯ ಚಾಲನೆಯ ಪರಿಣಾಮ ವಾಹನವೊಂದು ರಸ್ತೆ ಬದಿಯ ಗುಂಡಿಗೆ ಬಿದ್ದ ಘಟನೆ ನೆಲ್ಲಹುದಿಕೇರಿಯಲ್ಲಿ ನಡೆದಿದೆ.
ನೆಲ್ಲಹುದಿಕೇರಿಯ ಗ್ರಾ.ಪಂ ಕಚೇರಿಗೆ ತೆರಳುವ ತಿರುವು ಒಂದು ಬದಿಯಲ್ಲಿ ಗುಂಡಿ ಪ್ರದೇಶವಿದ್ದು, ರಸ್ತೆಗೆ ತಡೆಗೋಡೆ ನಿರ್ಮಿಸುವಂತೆ ಸಾರ್ವಜನಿಕರು ಸ್ಥಳೀಯ ಗ್ರಾ.ಪಂಗೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ತೋರಿರುವುದು ಘಟನೆಗೆ ಕಾರಣವಾಗಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.
ಈ ಹಿನ್ನೆಲೆಯಲ್ಲಿ ಸೋಮವಾರ ಚಾಲಕನೋರ್ವ ಎದುರು ಬರುವ ವಾಹನಕ್ಕೆ ದಾರಿ ನೀಡುವ ಉದ್ದೇಶಕ್ಕೆ ತನ್ನ ವಾಹನವನ್ನು ಬದಿಗೆ ಸರಿಸಿದ ಸಂದರ್ಭದಲ್ಲಿ ಬೃಹತ್ ಗುಂಡಿಗೆ ವಾಹನವು ಮಗುಚಿದೆ. ಅದೃಷ್ಟವಶಾತ್ ಚಾಲಕನಿಗೆ ಗಂಭೀರವಾದ ಗಾಯವಾಗಿಲ್ಲ. ವ್ಯಾಪ್ತಿಯಲ್ಲಿ ಹದಿಹರೆಯದವರು ವಾಹನ ಚಲಾಯಿಸುತ್ತಿರುವ ಹಿನ್ನೆಲೆಯಲ್ಲಿ ತಡೆಗೋಡೆ ನಿರ್ಮಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರಾಣಾಪಾಯ ಸಂಭವಿಸಲಿದೆ ಎಂದು ಸ್ಥಳೀಯರು ಗ್ರಾ.ಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now