ಸೈಬರ್ ವಂಚಕರ ಹೊಸ ಜಾಲ: ನಕಲಿ ಟ್ರಾಫಿಕ್ ಚಲನ್ ಲಿಂಕ್ ಕ್ಲಿಕ್ ಮಾಡುವ ಮುನ್ನ ಎಚ್ಚರ!

ಸೈಬರ್ ವಂಚಕರ ಹೊಸ ಜಾಲ: ನಕಲಿ ಟ್ರಾಫಿಕ್ ಚಲನ್ ಲಿಂಕ್ ಕ್ಲಿಕ್ ಮಾಡುವ ಮುನ್ನ ಎಚ್ಚರ!
0Shares

ಉಡುಪಿ ಜಿಲ್ಲಾ ಪೊಲೀಸ್ – ಸಾರ್ವಜನಿಕ ಪ್ರಕಟಣೆ ಸೈಬರ್ ವಂಚನೆ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನಕಲಿ ಟ್ರಾಫಿಕ್ ಚಲನ್ ಸಂದೇಶಗಳ ಬಗ್ಗೆ ಎಚ್ಚರದಿಂದಿರಿ!

ಮೂಲ ಸಂದೇಶ ಮತ್ತು ನಕಲಿ ಸಂದೇಶದ ನಡುವಿನ ವ್ಯತ್ಯಾಸವನ್ನು ಗುರುತಿಸಿ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸಾರ್ವಜನಿಕರಿಗೆ ವಾಹನ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ನಕಲಿ ಇ-ಚಲನ್ ಸಂದೇಶಗಳ ಬಗ್ಗೆ ಎಚ್ಚರಿಕೆ ನೀಡಿದೆ.

  1. ANPR ಕ್ಯಾಮೆರಾಗಳ ಮೂಲಕ ಚಲನ್ ಪರಿಶೀಲನೆ

ಜಿಲ್ಲೆಯಲ್ಲಿ ಅಳವಡಿಸಿರುವ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (ANPR) ಕ್ಯಾಮೆರಾಗಳ ಮೂಲಕ ಸಂಚಾರ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚಿ, ಅವುಗಳಿಗೆ ಸಂಬಂಧಿಸಿದ ಚಲನ್‌ಗಳನ್ನು ಅಧಿಕೃತ ಪೊಲೀಸ್ ವ್ಯವಸ್ಥೆಯ ಮೂಲಕ ದಾಖಲಿಸಲಾಗುತ್ತದೆ.
ಜಿಲ್ಲೆಯಲ್ಲಿ ಅಳವಡಿಸಿರುವ ANPR ಕ್ಯಾಮೆರಾಗಳ ಮೂಲಕ ಸಂಚಾರ ಉಲ್ಲಂಘನೆಗಳಿಗೆ ಚಲನ್ ಜನರೇಟ್ ನಡೆಯುತ್ತಿದೆ. JM-KSPTRS-S ಎಂಬ ಸರ್ವರ್ ಪ್ಲಾಟ್‌ಫಾರ್ಮ್‌ನಿಂದ ಬರುವ ಎಸ್‌ಎಂಎಸ್ ಮಾತ್ರ ಅಧಿಕೃತವಾಗಿದೆ.

  1. ನಕಲಿ ಟ್ರಾಫಿಕ್ ಚಲನ್ ಸಂದೇಶಗಳ ಬಗ್ಗೆ ಎಚ್ಚರಿಕೆ

ನಿಮ್ಮ ಮೊಬೈಲ್‌ಗೆ ಟ್ರಾಫಿಕ್ ಚಲನ್ ಬಾಕಿ ಇದೆ ಎಂದು ತಿಳಿಸುವ ಸಂದೇಶ ಬಂದು, ಅದರೊಂದಿಗೆ APK ಫೈಲ್ ಡೌನ್‌ಲೋಡ್ ಮಾಡಲು ಅಥವಾ ಅಪರಿಚಿತ ಲಿಂಕ್ ಮೂಲಕ ಹಣ ಪಾವತಿಸಲು ಸೂಚಿಸಿದರೆ ಎಚ್ಚರಿಕೆ ವಹಿಸಿ. ಇಂತಹ ಸಂದೇಶಗಳು ಸೈಬರ್ ವಂಚನೆಯ ಭಾಗವಾಗಿರಬಹುದು.

  1. ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆಗಳು

ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.

ಟ್ರಾಫಿಕ್ ಚಲನ್ ಪಾವತಿಸುವ ನೆಪದಲ್ಲಿ ಕಳುಹಿಸುವ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ.

ಅಪರಿಚಿತ ಮೂಲಗಳಿಂದ ಬಂದ ಅಪ್ಲಿಕೇಶನ್‌ಗಳನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಬೇಡಿ.

ಅಧಿಕೃತ ವೆಬ್‌ಸೈಟ್‌ಗಳ ಮೂಲಕವೇ ಚಲನ್ ವಿವರಗಳನ್ನು ಪರಿಶೀಲಿಸಿ ಮತ್ತು ಹಣ ಪಾವತಿಸಿ.

ಸಾರ್ವಜನಿಕ ಹಿತದೃಷ್ಟಿಯಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಮನವಿ: ಸೈಬರ್ ವಂಚನೆಗಳಿಂದ ನಿಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ರಕ್ಷಿಸಿಕೊಳ್ಳಿ. ಇಂತಹ ಅನುಮಾನಾಸ್ಪದ ಸಂದೇಶಗಳನ್ನು ನಿರ್ಲಕ್ಷಿಸಿ, ಇತರರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now