
ಕಾಪು, ಅ.23 ಚಾಲಕನಿಗೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡರೂ, ಸಮಯಪ್ರಜ್ಞೆ ಮೆರೆದು ಬಸ್ಸನ್ನು ರಸ್ತೆಬದಿಗೆ ಚಲಾಯಿಸುವ ಮೂಲಕ ಭಾರಿ ಅಪಘಾತವನ್ನು ತಪ್ಪಿಸಿ, ಪ್ರಯಾಣಿಕರ ಪ್ರಾಣ ಉಳಿಸಿದ ಘಟನೆ ಮುಳೂರಿನಲ್ಲಿ ಗುರುವಾರ ನಡೆದಿದೆ.
ಮಂಗಳೂರಿನಿಂದ ಉಡುಪಿ ಕಡೆಗೆ ಚಲಿಸುತ್ತಿದ್ದ ‘ವಿಜಯಲಕ್ಷ್ಮಿ ಎಕ್ಸ್‌ಪ್ರೆಸ್’ ಬಸ್ ಮುಳೂರು ತಲುಪಿದಾಗ ಈ ಘಟನೆ ಸಂಭವಿಸಿದೆ. ಚಾಲಕನಿಗೆ ದಿಢೀರ್ ಆರೋಗ್ಯದಲ್ಲಿ ವ್ಯತ್ಯಾಸವಾದ ಕಾರಣ, ಬಸ್ ನಿಯಂತ್ರಣ ತಪ್ಪಿ ಎಡಕ್ಕೆ ಸಾಗಿದೆ.
ಅನಾರೋಗ್ಯದ ನಡುವೆಯೂ ಚಾಲಕ ತಕ್ಷಣ ಸ್ಪಂದಿಸಿ ಬಸ್ಸನ್ನು ರಸ್ತೆಯ ಎಡಭಾಗಕ್ಕೆ ತಿರುಗಿಸಿದ್ದಾರೆ. ಈ ವೇಳೆ ಬಸ್ ರಸ್ತೆಬದಿಯಲ್ಲಿದ್ದ ಸಣ್ಣ ಮರಕ್ಕೆ ಮೊದಲು ಢಿಕ್ಕಿ ಹೊಡೆದು, ನಂತರ ಮುಂದೆ ಸಾಗಿ ದೊಡ್ಡ ಮರಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಇದರಿಂದಾಗಿ ಸಂಭವನೀಯ ಅಪಾಯವೊಂದು ತಪ್ಪಿದಂತಾಗಿದೆ.
ಬಸ್ ಸ್ವಲ್ಪ ಪಕ್ಕಕ್ಕೆ ವಾಲಿ ಚಲಿಸಿದ್ದರೂ ಹತ್ತಿರದಲ್ಲೇ ಇದ್ದ ಎರಡು ವಿದ್ಯುತ್ ಕಂಬಗಳಿಗೆ ಢಿಕ್ಕಿ ಹೊಡೆಯುವ ಸಾಧ್ಯತೆಯಿತ್ತು. ಹಾಗಾಗಿದ್ದರೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಮತ್ತಷ್ಟು ಗಂಭೀರ ಅಪಾಯ ಎದುರಾಗುತ್ತಿತ್ತು. ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಚಾಲಕ ದಿಢೀರ್ ಅಸ್ವಸ್ಥಗೊಂಡರೂ ಅವರು ತೋರಿಸಿದ ಸಮಯಪ್ರಜ್ಞೆ, ಬಸ್ ರಸ್ತೆಬದಿಯ ಮರಕ್ಕೆ ಢಿಕ್ಕಿ ಹೊಡೆದು ನಿಲ್ಲುವಂತೆ ಮಾಡಿ ಭಾರಿ ದುರಂತವೊಂದನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
na
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now