ಟೈಮಿಂಗ್ ವಿಚಾರಕ್ಕೆ ಬಸ್‌ಗಳನ್ನು ತಾಗಿಸಿದ ಚಾಲಕರು, ಸಾರ್ವಜನಿಕ ಸ್ಥಳದಲ್ಲಿ ಗಲಾಟೆ – ಕಾಪು ಪೊಲೀಸರಿಂದ ಪ್ರಕರಣ ದಾಖಲು

ಟೈಮಿಂಗ್ ವಿಚಾರಕ್ಕೆ ಬಸ್‌ಗಳನ್ನು ತಾಗಿಸಿದ ಚಾಲಕರು, ಸಾರ್ವಜನಿಕ ಸ್ಥಳದಲ್ಲಿ ಗಲಾಟೆ – ಕಾಪು ಪೊಲೀಸರಿಂದ ಪ್ರಕರಣ ದಾಖಲು
0Shares

ದಿನಾಂಕ 27-07-2026 ರಂದು ಬೆಳಿಗ್ಗೆ 9.27 ಗಂಟೆಯ ಸುಮಾರಿಗೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಾಪು ಪಡು ಗ್ರಾಮದ ಕಾಪು ಹೊಸ ಮಾರಿಗುಡಿ ಅಂಡರ್ ಪಾಸ್ ಬಳಿ ಇರುವ ಬಸ್ ನಿಲ್ದಾಣದ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಟೈಮಿಂಗ್ ವಿಚಾರಕ್ಕೆ ಸಂಬಂಧಿಸಿ KA 20 AB 5493 ನೋಂದಣಿಯ SANDESH ಬಸ್ ಹಾಗೂ KA 19 AE 1095 ನೋಂದಣಿಯ ANAND ಬಸ್ಸಿನ ಚಾಲಕರು ಹಾಗೂ ಕಂಡಕ್ಟರ್ ಗಳು ಪರಸ್ಪರ ಬಸ್ಸುಗಳನ್ನು ತಾಗಿಸಿಕೊಂಡು,ಕೈ-ಕೈ ಮಿಲಾಯಿಸಿ, ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗವನ್ನುಂಟು ಮಾಡಿರುತ್ತಾರೆ. ಆ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 89/2026 U/s: 281, 194(2), 292, 324(4), 115(2), 352, 351(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದ ಆಪಾದಿತರಾದ ರಮೇಶ್, ಅಭಿಷೇಕ್(ಬಸ್ ಚಾಲಕರು), ವಿಜಯಕುಮಾರ್, ಹರೀಶ್ ಬಿ ಹೆಗ್ಡೆ (ಬಸ್ ಕಂಡಕ್ಟರ್) ರವರುಗಳನ್ನು ಮತ್ತು ಎರಡು ಬಸ್ ಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಲಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now