
ಬಂಟ್ವಾಳ: ಬೆಂಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ನಿಷೇದಿತ ಮಾದಕವಸ್ತು ಸರಬರಾಜು ಮಾಡುತ್ತಿದ್ದ ಡ್ರಗ್ಸ್ ಮಾಫಿಯಾವನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಭೇದಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸುಮಾರು 46 ಲಕ್ಷ ರೂ ಮೌಲ್ಯದ ಎಂ ಡಿ ಎಂ ಎ ಮಾದಕವಸ್ತು ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೋಳಂತೂರು ಗ್ರಾಮದ ಎನ್.ಸಿ. ರೋಡ್ ನ ನಿಜಾಮುದ್ದಿನ್ (30) ಹಾಗೂ ಮಹಮ್ಮದ್ ಶಾಹಿಂ (19)ಬಂಧಿತ ಆರೋಪಿಗಳು.
ಕಳೆದ ಕೆಲ ಸಮಯಗಳಿಂದ ಬೆಂಗಳೂರಿನಿಂದ ಬಂಟ್ವಾಳ ಮೂಲಕ ದ.ಕ. ಜಿಲ್ಲೆಗೆ ಮಾದಕವಸ್ತು ಸರಬರಾಜಾಗುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಇದರ ಬೆನ್ನತ್ತಿದ ಪೊಲೀಸರು ಬಲೆ ಬೀಸಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now