ಶಿರ್ವ: ಸಂತ ಮೇರಿ ಕಾಲೇಜು, ಶಿರ್ವ ಇಲ್ಲಿನ ವಿದ್ಯಾರ್ಥಿ ಕ್ಷೇಮ ಪಾಲನಾ ಸಂಘ ಮತ್ತು ಐ.ಕ್ಯೂಎ.ಸಿ. ಇವರ ಸಹಯೋಗದೊಂದಿಗೆ ಕಾಲೇಜು ವಾರ್ಷಿಕೋತ್ಸವ ಆಚರಣೆ

ಶಿರ್ವ: ಸಂತ ಮೇರಿ ಕಾಲೇಜು, ಶಿರ್ವ ಇಲ್ಲಿನ ವಿದ್ಯಾರ್ಥಿ ಕ್ಷೇಮ ಪಾಲನಾ ಸಂಘ ಮತ್ತು ಐ.ಕ್ಯೂಎ.ಸಿ. ಇವರ ಸಹಯೋಗದೊಂದಿಗೆ ಕಾಲೇಜು ವಾರ್ಷಿಕೋತ್ಸವ ಆಚರಣೆ

0Shares

ಶಿರ್ವ: ಸಂತ ಮೇರಿ ಕಾಲೇಜು, ಶಿರ್ವ ಇಲ್ಲಿನ ವಿದ್ಯಾರ್ಥಿ ಕ್ಷೇಮ ಪಾಲನಾ ಸಂಘ ಮತ್ತು ಐ.ಕ್ಯೂಎ.ಸಿ. ಇವರ ಸಹಯೋಗದೊಂದಿಗೆ ಕಾಲೇಜು ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿ ಡಾ. ಡೆನ್ನಿಸ್ ಫೆರ್ನಾಂಡಿಸ್, ನಿವೃತ್ತ ಇತಿಹಾಸ ಸಹ ಪ್ರಾಧ್ಯಾಪಕರು, ಸಂತ ಅಲೋಶಿಯಸ್ ಸ್ವಾಯತ್ತ ವಿಶ್ವವಿದ್ಯಾನಿಲಯ ಮಂಗಳೂರು ಇವರು ಮಾತನಾಡಿ, ನಾನು ಸಂತ ಮೇರಿ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವುದು ನನಗೆ ಹೆಮ್ಮೆಯ ವಿಚಾರವಾಗಿದೆ. ನಮ್ಮ ಕಾಲದಲ್ಲಿ ನಮ್ಮ ಆಸಕ್ತಿ, ಅಭಿರುಚಿ ಬೇರೆಯಾಗಿತ್ತು ಮತ್ತು ನಾವು ಮಾಡುವ ವೃತ್ತಿ ಬೇರೆಯಾಗಿತ್ತು. ಆದರೆ ಈಗಿನ ಯುವ ಪೀಳಿಗೆಯಾದರೂ ತಮ್ಮ ಅಭಿರುಚಿಯ ಕ್ಷೇತ್ರವನ್ನೆ ವೃತ್ತಿ ಕ್ಷೇತ್ರವನ್ನಾಗಿ ಆಯ್ದುಕೊಳ್ಳಬೇಕು. ಈ ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆದು ನಿಲ್ಲಲು ಹಲವರ ಪರಿಶ್ರಮ, ತ್ಯಾಗ ಇದೆ. ಅದರಲ್ಲೂ ಫಾದರ್ ಹೆನ್ರಿ ಕ್ಯಾಸ್ತಲಿನೋ ಅವರು ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿರಿಸಿ, ಈ ಕಾಲೇಜನ್ನು ಕಟ್ಟಿ ಬೆಳೆಸಿದರೂ, ಅವರ ತ್ಯಾಗಕ್ಕೆ ನಾವೆಂದು ಋಣಿಗಳು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿರುವ ಕಾಲೇಜಿನ ಪ್ರಾಂಶುಪಾ¯ರಾದ ಡಾ. ಹೆರಾಲ್ಡ್ ಐವನ್ ಮೊನೀಸ್‌ರವರು ವಾರ್ಷಿಕ ವರದಿಯನ್ನು ವಾಚಿಸಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ವೇದಿಕೆಗಳನ್ನು ಬಳಸಿಕೊಳ್ಳಬೇಕು ಎಂದರು. ಗೌರವ ಅತಿಥಿಗಳಾಗಿ ಶ್ರೀ ಜುಲಿಯನ್ ರೊಡ್ರಿಗಸ್ ಉಪಾಧ್ಯಕ್ಷರು, ಚರ್ಚ್ ಪಾ¯ನಾ ಮಂಡಳಿ ಶಿರ್ವ, ಶ್ರೀ ಉರ್ಬನ್ ನೋವೆಲ್ ಡಿಸೋಜ, ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ ಹಾಗೂ ಶ್ರೀ ಅರುಣ್ ಅಂತೋನಿ ಫೆರ್ನಾಂಡಿಸ್ ಅಧ್ಯಕ್ಷರು ರಕ್ಷಕ-ಶಿಕ್ಷಕ ಸಂಘÀ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸಂಸ್ಥೆಗೆ ಮತ್ತು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶ್ರೀ ಮೆಲ್ವಿನ್ ಕ್ಯಾಸ್ತಲಿನೊ, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಹಾಗೂ ಶ್ರೀ ಜಗದೀಶ್ ಆಚಾರ್ಯ ಐ.ಕ್ಯೂಎ.ಸಿ. ಸಂಯೋಜಕರು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಭಾ ಪುರಸ್ಕಾರದ ಪಟ್ಟಿಯನ್ನು ಶ್ರೀ ಕೆ. ಪ್ರವೀಣ್ ಕುಮಾರ್, ಶೈಕ್ಷಣಿಕ ಬಹುಮಾನಗಳ ಪಟ್ಟಿಯನ್ನು ಶ್ರೀಮತಿ ತನುಜಾ ಎನ್. ಸುವರ್ಣ,ದತ್ತಿ ನಿಧಿ ಬಹುಮಾನಗಳ ಪಟ್ಟಿಯನ್ನು ಶ್ರೀಮತಿ ಶರ್ಮಿಳಾ ಹಾಗೂ ಕ್ರೀಡಾ ಕ್ಷೇತ್ರ ಬಹುಮಾನಗಳ ಪಟ್ಟಿಯನ್ನು ಶ್ರೀಮತಿ ಸಂಧ್ಯಾ ಕೆ. ಓದಿದರು. ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉಪನ್ಯಾಸಕಿ ಡಾ ಗುಲಾಬಿ ಪೂಜಾರಿ, ಗ್ರಂಥಪಾಲಕಿ ಶ್ರೀಮತಿ ತನುಜಾ ಹಾಗೂ ವಿದ್ಯಾರ್ಥಿಗಳಾದ ಶ್ರೀ ಜೀವನ್ ಕುಮಾರ್ ಪೂಜಾರಿ , ಕುಮಾರಿ ಧನ್ಯ ಹಾಗೂ ಸಾಕ್ಷಿ ಶೆಟ್ಟಿಯವರನ್ನು ಗೌರವಿಸಲಾಯಿತು.
ಸಾಪ್ಟ್ ಸೆಕ್ರೆಟರಿ ಶ್ರೀಮತಿ ಸಂಗೀತಾ ಎಚ್. ಪೂಜಾರಿ ಸ್ವಾಗತಿಸಿದರು. ತೃತೀಯ ಬಿ.ಎ.ಯ ವಿದ್ಯಾರ್ಥಿ ಶ್ರೀ ಸೀನು ನಾಯಕ್ ಮತ್ತು ತೃತೀಯ ಬಿ.ಕಾಂ.ನ ದಿಶಾ ಕ್ರಾಸ್ತಾ ಕಾರ್ಯಕ್ರಮವನ್ನು ನಿರೂಪಿಸಿ ಶ್ರೀ ಶಾನ್ ಲೋಬೊ, ವಿದ್ಯಾರ್ಥಿ ನಾಯಕ ವಂದಿಸಿದರು. ಆಡಳಿತ ವರ್ಗದ ಸಿಬ್ಬಂದಿಗಳು ಸಹಕರಿಸಿದರು, ಕಾಲೇಜಿನ ಬೋಧಕ ಮತ್ತು ಬೊಧಕೇತರ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now