
ಉಡುಪಿ : ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯ ಹಲವು ವಿದ್ಯಾರ್ಥಿಗಳು ವಿಶೇಷ ರೀತಿಯಲ್ಲಿ ಸಾಧನೆಯನ್ನು ಮಾಡಿದ್ದಾರೆ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ, ಉಡುಪಿ ನಗರದ ಟೂರಿಸ್ಟ್ ಕಾರು ಚಾಲಕನ ಪುತ್ರ ಶಾಲೆಯಲ್ಲಿಯೇ ಐದನೇ ರ್ಯಾಂಕ್ ಪಡೆದು ಅಮೋಘ ಸಾಧನೆ ಮಾಡಿದ್ದಾರೆ.
‘ಉಡುಪಿ ಟ್ರಾವೆಲ್ಸ್’ ಹೆಸರಿನ ಟೂರಿಸ್ಟ್ ಚಾಲಕ ಮಾಲಕರಾಗಿರುವ ಉದ್ಯಾವರದ ಕಡವಿನ ಬಾಗಿಲು ನಿವಾಸಿ ಸ್ಟ್ಯಾನಿ ಫೆರ್ನಾಂಡಿಸ್ ಮತ್ತು ಪ್ರಮೀಳಾ ಫೆರ್ನಾಂಡಿಸ್ ರವರ ಸುಪುತ್ರ ಸೋಹನ್ ಫೆರ್ನಾoಡಿಸ್ ವಿಶೇಷ ಸಾಧನೆ ಮಾಡಿದ್ದು, ಹೆತ್ತವರ ಸಂಭ್ರಮ ಇಮ್ಮಡಿಗೊಳಿಸಿದೆ. ಉದ್ಯಾವರದ ಸoತ ಫ್ರಾನ್ಸಿಸ್ ಕ್ಸೇವಿಯರ್ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಸೋಹನ್ 95.20% ಅಂಕಗಳೊಂದಿಗೆ ಶಾಲೆಯಲ್ಲಿಯೇ ಐದನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಹಿಂದಿ ವಿಭಾಗದಲ್ಲಿ ನೂರಕ್ಕೆ ನೂರು ಅಂಕ ಪಡೆದುಕೊಂಡಿರುವ ಸೋಹನ್, ಒಟ್ಟು 595 ಅಂಕವನ್ನು ಪಡೆದುಕೊಂಡಿದ್ದಾರೆ. ಜನವರಿಯಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಕ್ರೈಸ್ತ ವಿದ್ಯಾರ್ಥಿಗಳಿಗೆ ನಡೆದ ಕ್ಯಾಟಿಕಿಸಂ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದು, ‘ಅನುಗ್ರಹ’ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಧರ್ಮಾಧ್ಯಕ್ಷರಿಂದ ಗೌರವನ್ನು ಪಡೆದುಕೊಂಡಿದ್ದರು. ಇವರ ತಂದೆ ನಗರದ ಪ್ರತಿಷ್ಠಿತ ಆಲ್ವಿನ್ ಬೇಕರಿ ಮುಂಭಾಗದ ಟೂರಿಸ್ಟ್ ಕಾರು ನಿಲ್ದಾಣದಲ್ಲಿ ಹಲವು ವರ್ಷಗಳಿಂದ ಚಾಲಕ ಮಾಲಕರಾಗಿ ಉದ್ಯೋಗವನ್ನು ನಡೆಸುತ್ತಿದ್ದಾರೆ.
ನಮ್ಮ ವರದಿಗಾರರು
ಸ್ಟೀವನ್ ಕುಲಾಸೊ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now