ಎಸ್.ಎಸ್.ಎಲ್.ಸಿ ಯಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ದ್ವಿತೀಯ : ಜಿಲ್ಲಾಧಿಕಾರಿಗಳಿಂದ ಶ್ಲಾಘನೆ

ಎಸ್.ಎಸ್.ಎಲ್.ಸಿ ಯಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ದ್ವಿತೀಯ : ಜಿಲ್ಲಾಧಿಕಾರಿಗಳಿಂದ ಶ್ಲಾಘನೆ

0Shares

ಉಡುಪಿ ಏಪ್ರಿಲ್ 23: ಇಂದು ಪ್ರಕಟಗೊಂಡ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯು ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆದಿರುವುದು ಸಂತೋಷದ ವಿಷಯವಾಗಿದೆ. ಕುಂದಾಪುರ ತಾಲೂಕಿನ ಶಂಕರನಾರಾಯಣ ಮದರ್ ಥೆರೇಸಾ ಮೆಮೋರಿಯಲ್ ಸ್ಕೂಲ್ನ ಪ್ರೀತಮ್ ಜಿ. ಪೂಜಾರಿ ಅವರು ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆಯುವುದರೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಇವರಿಗೆ ಜಿಲ್ಲಾಡಳಿತದ ಪರವಾಗಿ ಹಾಗೂ ನನ್ನ ವೈಯಕ್ತಿಕ ಅಭಿನಂದನೆಗಳು.

ಜಿಲ್ಲೆಯು ರಾಜ್ಯದಲ್ಲಿ ಎರಡನೇ ಸ್ಥಾನವನ್ನು ಪಡೆಯುವಲ್ಲಿ ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ಸಹಕಾರ, ಮುಖ್ಯವಾಗಿ ಇಲ್ಲಿನ ಬೋಧಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ವಹಿಸಿರುವ ನಿರ್ಣಾಯಕ ಪಾತ್ರ ಮತ್ತು ಎಲ್ಲಾ ಅಧಿಕಾರಿ ಸಿಬ್ಬಂಧಿಗಳ ಕಾರ್ಯತತ್ಪರತೆ ಶ್ಲಾಘನೀಯ. ಶೈಕ್ಷಣಿಕವಾಗಿ ಜಿಲ್ಲೆಯ ಗರಿಮೆಯನ್ನು ಹೆಚ್ಚಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಅಭಿನಂದನೆಗಳು.

ಇದರೊಂದಿಗೆ 625 ಕ್ಕೆ 624 ಅಂಕ ಪಡೆದ ವಿದ್ಯಾರ್ಥಿಗಳಾದ ಕುಂದಾಪುರದ ಶ್ರೀ ವೆಂಕಟ್ರಮಣ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ನ ಅನ್ವರ್ಥ್ ಪೂಜಾರಿ, ಕಾರ್ಕಳ ತಾಲೂಕು ಬೈಲೂರು ಸರಕಾರಿ ಜೂನಿಯರ್ ಕಾಲೇಜಿನ ಲಿಸಾ ಬಾರ್ಬೋಝಾ, ಕಾರ್ಕಳ ಕುಕ್ಕುಂದೂರು ಗಣಿತ್ ನಗರದ ಜ್ಞಾನಸುಧಾ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ನ ವಿದ್ಯಾರ್ಥಿಗಳಾದ ಮಹಾಲಕ್ಷಿ್ಮೀ ಭಾಗವ್ ಹಾಗೂ ಮಹಾಲಕ್ಷಿ್ಮೀ ಪೈ ಬಿ, ಕೋಟ ವಿವೇಕ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ನ ಚೈತನ್ಯಶ್ರೀ ಆರ್ ಉಡುಪ, 625 ಕ್ಕೆ 623 ಅಂಕ ಪಡೆದ ಕುಂದಾಪುರದ ಶ್ರೀ ವೆಂಕಟ್ರಮಣ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ನ ಪ್ರಾರ್ಥನಾ ಜಿ, ಸಾತ್ವಿಕ್ ಎಸ್ ಭಟ್, ಥಕ್ಷಾ ಪಿ. ಶೆಟ್ಟಿ ಹಾಗೂ ಕಾರ್ಕಳ ಕುಕ್ಕುಂದೂರು ಗಣಿತ್ ನಗರದ ಜ್ಞಾನಸುಧಾ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ನ ವೈಷ್ಣವಿ ಶೆಟ್ಟಿಗಾರ್ ಮತ್ತು 625 ಕ್ಕೆ 622 ಅಂಕ ಪಡೆದ ಕೋಟ ವಿವೇಕ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ನ ಸಂಕಲ್ಪ್ ಕುಮಾರ್ ಇವರಿಗೂ ಜಿಲ್ಲಾಡಳಿತದ ಪರವಾಗಿ ಹಾಗೂ ನನ್ನ ವೈಯಕ್ತಿಕ ಅಭಿನಂದನೆಗಳು. 

ಜಿಲ್ಲೆಯಲ್ಲಿ ಒಟ್ಟು 13,373 ರೆಗ್ಯೂಲರ್ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 13,129 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಉಡುಪಿ ಜಿಲ್ಲೆಯು ಶೇ. 98.18 ರಷ್ಟು ಫಲಿತಾಂಶ ದಾಖಲಿಸಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now