ಉಡುಪಿ : SSLC ಫಲಿತಾಂಶದಲ್ಲಿ 94.08% ಅಂಕಗಳನ್ನು ಪಡೆದ ಸ್ಕೌಟ್ಸ್ ಕಮಾಂಡರ್

ಉಡುಪಿ : SSLC ಫಲಿತಾಂಶದಲ್ಲಿ 94.08% ಅಂಕಗಳನ್ನು ಪಡೆದ ಸ್ಕೌಟ್ಸ್ ಕಮಾಂಡರ್

0Shares

ಉಡುಪಿ : ನಿನ್ನೆ ಪ್ರಕಟಗೊಂಡ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆಯ ಹಿರಿಯ ಮತ್ತು ಪ್ರತಿಷ್ಠಿತ ವಿದ್ಯಾ ಸಂಸ್ಥೆ ಸಂತ ಸಿಸಿಲಿ ಇಂಗ್ಲಿಷ್ ಮಾಧ್ಯಮ ಶಾಲೆಯು ಉತ್ತಮ ಫಲಿತಾಂಶ ಕಂಡುಕೊಂಡಿದ್ದು, ಇಲ್ಲಿಯ ಶಾಲಾ ಉಪನಾಯಕ ಮತ್ತು ಸ್ಕೌಟ್ಸ್ ಕಮಾಂಡರ್ ನೆವಿಲ್ ಸ್ಯಾಮ್ಸನ್ ಡಿಸೋಜಾ 94.08% ಅಂಕಗಳೊಂದಿಗೆ ಶಾಲೆಯಲ್ಲಿ 11ನೇ ಸ್ಥಾನ ಪಡೆದುಕೊಂಡಿದ್ದಾರೆ.

ಉದ್ಯಾವರ ಚರ್ಚಿನ ಪಾಲನ ಮಂಡಳಿಯ ಕಾರ್ಯದರ್ಶಿ, ಯುವ ಉದ್ಯಮಿ ವಿಲ್ಫ್ರೆಡ್ ಡಿಸೋಜಾ ಮತ್ತು ನೀತಾ ಒಲಿವಿಯಾ ಮಚಾದೊ ದoಪತಿಗಳ ಪುತ್ರರಾಗಿರುವ ನೆವಿಲ್ ಒಟ್ಟು 588 ಅಂಕಗಳನ್ನು ಪಡೆದುಕೊಂಡಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲಿಯೂ ಪ್ರತಿಭಾವಂತರಾಗಿರುವ ನೆವಿಲ್, ಸ್ಕೌಟ್ಸ್ ಕಮಾಂಡರಾಗಿ ನೇತೃತ್ವ ವಹಿಸಿ ಪಥಸಂಚಲನದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರ ಚಿಕ್ಕಪ್ಪ ವo. ಫಾ. ರೋಷನ್ ಡಿಸೋಜಾ ಉಡುಪಿ ಧರ್ಮ ಪ್ರಾಂತ್ಯದ ಪಾಂಬೂರು ಚರ್ಚಿನ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now