
ನವದೆಹಲಿ: ಯೆಮೆನ್ ಮತ್ತು ಸೊಮಾಲಿಯಾ ಕರಾವಳಿ ಪ್ರದೇಶಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ 22 ಭಾರತೀಯ ಸಿಬ್ಬಂದಿಗಳಿದ್ದ ಎರಡು ವಾಣಿಜ್ಯ ಹಡಗುಗಳನ್ನು ಶಸ್ತ್ರಸಜ್ಜಿತ ಕಡಲ್ಗಳ್ಳರು ಅಪಹರಿಸಿದ್ದಾರೆ ಎಂದು ಹಿರಿಯ ನೌಕಾಯಾನ ಸಚಿವಾಲಯದ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಎರಡೂ ಹಡಗುಗಳಲ್ಲಿರುವ ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕ್ಯಾಮರೂನ್ ಧ್ವಜ ಹೊಂದಿದ್ದ ಎಂ/ವಿ ಲುಟುಫ್ (M/V LUTUF) ಹಡಗನ್ನು ಆಗಸ್ಟ್ 17ರಂದು ಸೊಮಾಲಿಯಾದ ಪುಂಟ್ಲ್ಯಾಂಡ್ ಕರಾವಳಿ ಬಳಿ ಅಪಹರಿಸಲಾಗಿದೆ. ಈ ಹಡಗಿನಲ್ಲಿ ಒಟ್ಟು 10 ಸಿಬ್ಬಂದಿ ಇದ್ದು, ಅವರಲ್ಲಿ 6 ಮಂದಿ ಭಾರತೀಯರು ಎಂದು ತಿಳಿದುಬಂದಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now