
ಹೆಜ್ಜೆಗಳು ದೃಢವಾಗಿದ್ದರೆ ದಾರಿ ತನ್ನಿಂದ ತಾನೇ ತೆರೆದುಕೊಳ್ಳುತ್ತದೆ —ಜಿ.ಪಂ.ಸಿಇಒ ಪ್ರತೀಕ್ ಬಾಯಲ್
ಸ್ವಾವಲಂಬನೆಯ ನಿಟ್ಟಿನಲ್ಲಿ ಮಹಿಳೆಯರು ದೃಢವಾದ ಹೆಜ್ಜೆಗಳನ್ನಿಟ್ಟಲ್ಲಿ ದಾರಿ ತನ್ನಿಂದ ತಾನೇ ತೆರೆದುಕೊಳ್ಳುತ್ತದೆ.ಎಂದು ಜಿ.ಪಂ ಸಿಇಒ ಪ್ರತೀಕ್ ಬಾಯಲ್ ಅವರು ಹೇಳಿದ್ದಾರೆ.ಕಾಪು ತಾಲೂಕಿನ ಕಳತ್ತೂರು ಚಂದ್ರನಗರದಲ್ಲಿ ಕಾಪು ತಾಲೂಕು ಮಹಿಳಾ ಕಿಸಾನ್ ಪ್ರೊಡ್ಯೂಸರ್ಸ್ ಕಂಪೆನಿ(ನಿ) ಇದರ ವತಿಯಿಂದ ಶುಭಾರಂಭಗೊಂಡಿರುವ ಅವನಿ ಕೊಬ್ಬರಿ ಎಣ್ಣೆ ಗಾಣದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.ಇಂದು ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಲು ವಿಫುಲ ಅವಕಾಶಗಳಿವೆ.ಸರಕಾರದ ಮಟ್ಟದಲ್ಲಿ ಬಹಳಷ್ಟು ಯೋಜನೆಗಳು ಮಹಿಳೆಯರಿಗಾಗಿಯೇ ಇದ್ದು ಆ ಯೋಜನೆಗಳ ಪ್ರಯೋಜನವನ್ನು ಮಹಿಳೆಯರು ಪಡೆದುಕೊಳ್ಳಬೇಕು. ಎಂದವರು ಸಲಹೆ ನೀಡಿದರು .ಕಾಪು ತಾಲೂಕು ಕಾರ್ಯನಿರ್ವಹಣಾಧಿಕಾರಿ ಶ್ರೀ ವಿಜಯ್ ಕುಮಾರ್ ಅವರು ಮಾತನಾಡಿ ಈ ಸಂಸ್ಥೆಯ ಎಲ್ಲಾ ನಿರ್ದೇಶಕರ ಹಾಗೂ ಕಾರ್ಯನಿರ್ವಾಹಣಾಧಿಕಾರಿ ಗಳ ಅವಿರತ ಪ್ರಯತ್ನ ಹಾಗೂ ಕಾರ್ಯತತ್ಪರತೆಗಳಿಂದಾಗಿ ಕಾಪು ತಾಲೂಕಿನಲ್ಲಿ ಇಂತಹ ಒಂದು ಉದ್ಯಮ ಆರಂಭಗೊಂಡಿರುವುದು ನನಗೆ ಅತ್ಯಂತ ಸಂತಸ ತಂದಿದೆ ಎಂದು ಹೇಳಿದರು.
ಜಿ.ಪಂ.ಸಹಾಯಕ ನಿರ್ದೇಶಕರಾದ ಜೇಮ್ಸ್ ಡಿ’ಸಿಲ್ವ ಅವರು ಮಾತನಾಡಿ ಪ್ರತೀಯೊಂದು ಕೃಷಿ ಗುಂಪುಗಳಲ್ಲೂ ಇಂತಹ ಕಾರ್ಯ ಚಟುವಟಿಕೆಗಳು ಆರಂಭವಾಗಬೇಕು.ತನ್ಮೂಲಕ ಈ ಕಂಪೆನಿ ಯಶಸ್ಸಿನ ದಾರಿಯಲ್ಲಿ ಮುನ್ನಡೆಯಬೇಕು ಎಂದು ನುಡಿದರು.ಈ ಕಾರ್ಯಕ್ರಮದಲ್ಲಿ ಎನ್ ಆರ್ ಎಲ್ ಎಮ್ ಜಿಲ್ಲಾ ಸಂಯೋಜಕರಾದ ಅವಿನಾಶ್,ಕಾಪು ತಾಲೂಕು ಸಂಯೋಜಕಿ ಶ್ರೀಮತಿ , ಕಟ್ಟಡ ಮಾಲೀಕರಾದ ಪ್ರವೀಣ್ ಕುಮಾರ್ ಗುರ್ಮೆ,ಕಂಪೆನಿಯ ಷೇರುದಾರರು,ಕಂಪೆನಿಯ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಮತಿ ಶಾರದೇಶ್ವರಿ,ಗೀತಾ ವಾಗ್ಳೆ,ಮಮತಾ ವಾಗ್ಳೆ,ಕವಿತಾ, ಕಸ್ತೂರಿ,ರೇಖಾ,ಅಪ್ಪಿ ಸಾಲ್ಯಾನ್ ಶರ್ಮಿಳಾ, ಶಕುಂತಳಾ ಮುಂತಾದವರು ಉಪಸ್ಥಿತರಿದ್ದರು.ಸಭೆಯ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಉಷಾ ದಯಾನಂದ್ ಅವರು ವಹಿಸಿದ್ದರು. ಕಂಪೆನಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ರೀನಾ ಹೆಗ್ಡೆ ಎಲ್ಲರನ್ನೂ ಸ್ವಾಗತಿಸಿದರು.ನಿರ್ದೇಶಕಿ ಪವಿತ್ರಾ ಗಿರೀಶ್ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.ಇದೇ ಸಂದರ್ಭದಲ್ಲಿ “ಅವನಿ ಹೋಂ ಪ್ರಾಡಕ್ಟ್ಸ್”ಅನ್ನು ಜಿ.ಪಂ.ಸಿಇಒ ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸುವುದರ ಜೊತೆಗೆ ಕಂಪೆನಿಯ ಮೊಬೈಲ್ ವಾಹನಕ್ಕೂ ಚಾಲನೆ ನೀಡಿದರು.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now