– ಶಿರ್ವ: ಮುದರಂಗಡಿ ಚರ್ಚ್ ಬಳಿ ಉದ್ಯಮಿ ಡೇವಿಡ್ ಡಿಸೋಜಾ ಗುಂಡಿಕ್ಕಿ ಹತ್ಯೆ, 7ನೇ ಆರೋಪಿ ಬಿಹಾರದಲ್ಲಿ ಬಂಧನ

– ಶಿರ್ವ: ಮುದರಂಗಡಿ ಚರ್ಚ್ ಬಳಿ ಉದ್ಯಮಿ ಡೇವಿಡ್ ಡಿಸೋಜಾ ಗುಂಡಿಕ್ಕಿ ಹತ್ಯೆ, 7ನೇ ಆರೋಪಿ ಬಿಹಾರದಲ್ಲಿ ಬಂಧನ
0Shares

ದಿನಾಂಕ 07/08/2026 ರಂದು ಮಧ್ಯಾಹ್ನ 3:45 ಗಂಟೆಗೆ ಕಾಪು ತಾಲೂಕು ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್‌ ಕಾಂಪ್ಲೆಕ್ಸ್‌ ನಲ್ಲಿ ಪ್ರಿನ್ಸ್ ಎಂಟರ್ಪ್ರೈಸಸ್ ನ ಮಾಲಕ ಡೇವಿಡ್ ಡಿಸೋಜಾ ಎಂಬವರನ್ನು ಮೋಟಾರು ಸೈಕಲಿನಲ್ಲಿ ಬಂದ ಆರೋಪಿತರ ಪೈಕಿ ಸಹಸವಾರನು ಪಿಸ್ತೂಲ್ ನಿಂದ ಡೇವಿಡ್ ಡಿಸೋಜಾರವರ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ ಬಗ್ಗೆ ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಯಲ್ಲಿರುತ್ತದೆ. ಸದ್ರಿ ಪ್ರಕರಣದಲ್ಲಿ ಈಗಾಗಲೇ ನೇರವಾಗಿ ಬಾಗಿಯಾದ ಆರೋಪಿತರಾದ ಅನ್ಮೋಲ್ ರಸ್ತೋಗಿ ಮತ್ತು ಜಿಯಾಹುಲ್ ವಾಜುಲ್ ಶೇಖ್ @ ದೀಪಕ್‌ ರವರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದರಿ ಪ್ರಕರಣದಲ್ಲಿನ 1 ನೇ ಆರೋಪಿ ರಾಜು ಈತನ ಮೇಲೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಸರ್ಕಾರಿ ನೌಕರರ ಮೇಲೆ ಕೊಲೆ ಯತ್ನ ಪ್ರಕರಣದಲ್ಲಿ ಗಾಯಗೊಂಡಿದ್ದು ಜಿಲ್ಲಾ ಸರ್ಕಾರಿ ಆಸ್ಪತ್ರೆ ಅಜ್ಜರಕಾಡು ಇಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಸದ್ರಿ ಆರೋಪಿಯು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಿಸಲಾಗುವುದು

ಸದರಿ ಪ್ರಕರಣದಲ್ಲಿ ಈ ಕೃತ್ಯ ಮಾಡಲು ಇತರ ಆರೋಪಿಗಳೊಂದಿಗೆ ಸೇರಿ ಅಪರಾಧಿಕ ಒಳಸಂಚು ನಡೆಸಿ, ಹಣಕಾಸು ಪೂರೈಕೆ ಮಾಡಿದ ಮೊಹಮ್ಮದ್‌ ಇರ್ಷಾದ್‌ ,ಚಿರಾಗ್‌ ಪೂಜಾರಿ, ಸದಾನಂದ ದೇವಾಡಿಗ ಮತ್ತು ಕಿಶೋರ್ ರಾಮ ಪೂಜಾರಿ ಎಂಬವರುಗಳನ್ನು ಆರೋಪಿತರನ್ನು ದಸ್ತಗಿರಿ ಮಾಡಿ ಈಗಾಗಲೇ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಸದ್ರಿ ಪ್ರಕರಣದಲ್ಲಿ ಕೃತ್ಯ ಮಾಡಲು ಇತರ ಆರೋಪಿಗಳೊಂದಿಗೆ ಸೇರಿ ಅಪರಾಧಿಕ ಒಳಸಂಚು ನಡೆಸಿ, ಹಣಕಾಸು ಪೂರೈಕೆ ಮಾಡಿದ ತಲೆ ಮರೆಸಿಕೊಂಡಿದ್ದ ಈ ಕೆಳಕಂಡ ಆರೋಪಿತನಾದ ಸೂರಜ್‌ ಕುಮಾರ್‌, ಪ್ರಾಯ (31)ಕಟ್ಟಾರಿ, ಶೇಖ್‌ ಪುರ, ಬಿಹಾರ, ಈತನನ್ನು ಆರೋಪಿತರ ಪತ್ತೆ ಬಗ್ಗೆ ವಿಶೇಷ ಕರ್ತವ್ಯದಲ್ಲಿ ತೆರಳಿದ್ದ ಕುಂದಾಪುರ ಪೊಲೀಸರು ಉತ್ತರ ಖಾಂಡ್‌ ರಾಜ್ಯದ ನೈನಿತಾಲ್‌ ಜಿಲ್ಲೆಯ ಹಲ್ದ್‌ವಾನಿ ಬಳಿ ವಶಕ್ಕೆ ಪಡೆದು, ಪ್ರಕರಣದ ತನಿಖಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ಆರೋಪಿ ಸೂರಜ್‌ ಕುಮಾರ್‌ ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಬಳಸಿದ ಮೊಬೈಲ್‌ ಫೋನ್‌ ವಶಕ್ಕೆ ಪಡೆದುಕೊಂಡಿದ್ದು ಆರೋಪಿ ಸೂರಜ್‌ ಕುಮಾರ್‌ನನ್ನು ಮಾನ್ಯ ನ್ಯಾಯಲಯಕ್ಕೆ ಈ ದಿನ ದಿನಾಂಕ:20/08/2026 ಹಾಜರುಪಡಿಸಲಾಗಿದೆ.

ತನಿಖೆ ಮುಂದುವರೆದಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now