
ಉಡುಪಿ : ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ನ
ದ್ವಿತೀಯ ಪಿಯುಸಿ ವಿದ್ಯಾರ್ಥಿ, ಲತಾ ಮತ್ತು ಗೋಪಾಲ ಆಚಾರ್ಯರ ಪುತ್ರ ವಿನಯ್ ಆಚಾರ್ಯಗೆ ಕಾಪು ತಾಲೂಕಿನ ಮುದರಂಗಡಿಯಲ್ಲಿ, ನಿಟ್ಟೆ ವಿಶ್ವವಿದ್ಯಾಲಯದ ನಿರ್ದೇಶಕರಾದ ಜಪಾನ್ನ ಅಲೆವೂರು ಹರಿಕೃಷ್ಣ ಭಟ್ ಮತ್ತು ಪತ್ನಿ ಯಸುಕೊ ಸತೊ ಇವರ ಪ್ರಾಯೋಜಕತ್ವದಲ್ಲಿ ರೂ.7 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಮನೆ ಶಾಂತಿ ನಿಲಯವನ್ನು ಶನಿವಾರ (ಅ. 3)ಹರಿಕೃಷ್ಣ ಭಟ್ ದಂಪತಿ ಹಸ್ತಾಂತರಿಸಿದರು. ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿತು.
ತನ್ನ ಬಾಲ್ಯದ ಕಷ್ಟದ ದಿನಗಳನ್ನು ನೆನಪಿಸಿಕೊಂಡು ನಾನೂ ಬೇರೆಯವರ ಸಹಾಯ ಪಡೆದು ಈ ಸಾಧನೆ ಮಾಡಲು ಸಾಧ್ಯವಾಯಿತು. ವಿನಯನು ಒಳ್ಳೆಯ ಅಂಕ ಗಳಿಸಿ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಕಲಿತು ಜಪಾನಿನಲ್ಲಿ ಉದ್ಯೋಗ ಪಡೆಯಲು ಸಾಧ್ಯವಿದೆ ಎಂದು ಹರಿಕೃಷ್ಣ ಭಟ್ ಹೇಳಿದರು.
ಯಾಸುಕೊ ಕನ್ನಡದಲ್ಲಿ ಸಾಟೊಗೆ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಯಕ್ಷಗಾನ ಕಲಾರಂಗದ ಕಾರ್ಯಕ್ರಮಗಳನ್ನು ನಾವು ತಪ್ಪಿಸಿಕೊಳ್ಳುವುದಿಲ್ಲ. ಅವರ ಪ್ರತಿಯೊಂದು ಕೆಲಸದಲ್ಲೂ ಸಮಾಜಕ್ಕೊಂದು ಸಂದೇಶವಿರುತ್ತದೆ. ಬಡವಿದ್ಯಾರ್ಥಿಗಳ ಕುರಿತು ಅವರು ಮಾಡುವ ಕೆಲಸ ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now