
ಪಿರ್ಯಾದಿ ರಿಷಭ್, ವ ಡಬಾಂಡೇಶ್ವರ, ಮಲ್ಪೆ ಇವರು ಮಲ್ಪೆಯ ಬಾಬುತೋಟ ಧಕ್ಕೆಯ ಬಳಿ ಮಲ್ಪೆ ಮರೈನ್ ಏಜೆನ್ಸಿಸ್ ವ್ಯವಹಾರ ಮಾಡಿಕೊಂಡಿರುವುದಾಗಿದೆ. ಏಜೆನ್ಸಿಸ್ ಪಕ್ಕದಲ್ಲಿ ಮೀನು ಬಾಕ್ಸ್ ಇಡುವ ಗೋಡನ್ ಇರುತ್ತದೆ. ಅದರ ಮಧ್ಯೆ ಸುಮಾರು 10 ಅಡಿ ಅಗಲದ ಖಾಲಿ ಜಾಗವಿದ್ದು, ಸದ್ರಿ ಜಾಗದಲ್ಲಿ ಬೋಟ್‌ಗೆ ಹೋಗುವ ಮೀನುಗಾರರು ಮೋಟಾರ್ ಸೈಕಲ್‌ಗಳನ್ನು ಇಟ್ಟು ಕೆಲಸ ಹೋಗುತ್ತಾರೆ. ಸದ್ರಿ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಗಳು ರಾತ್ರಿಯ ಹೊತ್ತು ಬಂದು ಮಲಗುತ್ತಿದ್ದರು. ಕಳೆದ ಸುಮಾರು 3 ವರ್ಷಗಳಿಂದ ಆಂಧ್ರಪ್ರದೇಶ ಮೂಲದ ಪರಮೇಶಿ @ ಪರಮ್ ವೇಲಿ, ಪ್ರಾಯ ಸುಮಾರು 55 ವರ್ಷ ಎಂಬವನು ಬಂದರು ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ಹೆಕ್ಕಿಕೊಂಡು ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಹೊತ್ತಿನ್ನಲ್ಲಿ ಪಿರ್ಯಾದಿದಾರರ ಏಜೆನ್ಸಿ ಪಕ್ಕದ ಖಾಲಿ ಜಾಗದಲ್ಲಿ ಪ್ಲಾಸ್ಟಿಕ್ ಗೋಣಿ ಚೀಲ ಹಾಕಿಕೊಂಡು ಮಲಗುತ್ತಿದ್ದನು. ದಿನಾಂಕ: 28.09.2026ರಂದು ಪಿರ್ಯಾದಿದಾರರು ಸಂಜೆ 7:00 ಗಂಟೆಗೆ ಏಜೆನ್ಸಿಗೆ ಶೆಟರ್ ಹಾಕಿ ಹೋಗುವಾಗ ಪರಮೇಶಿ @ ಪರಮ್ ವೇಲಿ ಎಂಬವನು ಏಜೆನ್ಸಿ ಪಕ್ಕದ ಖಾಲಿ ಜಾಗದಲ್ಲಿ ಕುಳಿತುಕೊಂಡಿದ್ದನು. ದಿನಾಂಕ: 29.09.2026ರಂದು ಬೆಳಿಗ್ಗೆ 08:30 ಗಂಟೆಗೆ ಪಿರ್ಯಾದಿದಾರರು ತನ್ನ ಏಜೆನ್ಸಿಗೆ ಬಂದು ಪಕ್ಕದ ಜಾಗದಲ್ಲಿ ಬೈಕ್ ಇಡಲು ಹೋದಾಗ ರಾತ್ರಿ ಏಜೆನ್ಸಿಯ ಪಕ್ಕದಲ್ಲಿ ಖಾಲಿ ಜಾಗದಲ್ಲಿ ಕುಳಿತುಕೊಂಡಿದ್ದ ಪರಮೇಶಿ @ ಪರಮ್ ವೇಲಿಯು ಅಡ್ಡವಾಗಿ ಗೋಣಿ ಚೀಲದ ಮೇಲೆ ರಕ್ತದ ಮಡವಿನಲ್ಲಿ ಬಿದ್ದುಕೊಂಡಿದ್ದು, ಆತ ಬಿದ್ದುಕೊಂಡಿದ್ದ ಸ್ಥಳದಲ್ಲಿ ಆತನ ಕುತ್ತಿಗೆಯ ಬಳಿಯಿಂದ ರಕ್ತ ಹರಿದು ನೆಲದ ಮೇಲೆ ಇರುವುದು ಕಂಡು ಬಂದಿರುತ್ತದೆ.
ಯಾರೋ ದುಷ್ಕರ್ಮಿಗಳು ದಿನಾಂಕ: 28.09.2026ರಂದು ಸಂಜೆ 7:00 ಗಂಟೆಯಿಂದ ದಿನಾಂಕ: 29.09.2026ರಂದು ಬೆಳಿಗ್ಗೆ 08:30 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ದ್ವೇಷದಿಂದ ಪರಮೇಶಿ @ ಪರಮ್ ವೇಲಿ ಪ್ರಾಯ ಸುಮಾರು 55 ವರ್ಷ ಈತನ ಕುತ್ತಿಗೆಯನ್ನು ಯಾವುದೋ ಆಯುಧದಿಂದ ಇರಿದು ಮಾರಾಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 107/2026, ಕಲಂ:103 BNS ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬೆಳ್ಳಿಯಪ್ಪ ಕೆ.ಯು ಮಾನ್ಯ ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪವಿಭಾಗ, ರಾಮಚಂದ್ರ ನಾಯಕ್, ಮಲ್ಪೆ ವೃತ್ತನಿರೀಕ್ಷಕರು ರವರ ಮಾರ್ಗದರ್ಶನದಲ್ಲಿ ಹಾಗೂ ಪೊಲೀಸ್ ಉಪನಿರೀಕ್ಷಕರು ಮಲ್ಪೆ ಪೊಲೀಸ್ ಠಾಣೆ ರವರಾದ ಅನೀಲ್ ಕುಮಾರ ಡಿ ಹಾಗೂ ಸಿಬ್ಬಂದಿಯವರಾದ ಹೆಚ್‌ಸಿ ವಿಶ್ವನಾಥ, ಹೆಚ್‌ಸಿ ಆದರ್ಶ ಸಿಪಿಸಿ ಕುಬೇರ ರವರನ್ನೊಳಗೊಂಡ ತಂಡ ಕಾರ್ಯಚರಣೆ ನಡೆಸಿ ಆರೋಪಿತನ್ನು ಹುಬ್ಬಳ್ಳಿಯ ಹೊರ ವಲಯದಲ್ಲಿ ಆರೋಗ್ಯ ದಾಸ್ @ ಕಾಮಿ(55), ಹುಬ್ಬಳ್ಳಿ ಎಂಬವರನ್ನು ದಸ್ತಗಿರಿ ಮಾಡಲಾಗಿರುತ್ತದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now