​ಕಾರ್ಕಳದಲ್ಲಿ ದನಕಳ್ಳತನ: ಹಿರಿಯಡಕ ಪೊಲೀಸರ ಚಾಣಾಕ್ಷ ಕಾರ್ಯಾಚರಣೆ, ವಾಹನ ಸಮೇತ ಆರೋಪಿಗಳು ಜೈಲಿಗೆ

​ಕಾರ್ಕಳದಲ್ಲಿ ದನಕಳ್ಳತನ: ಹಿರಿಯಡಕ ಪೊಲೀಸರ ಚಾಣಾಕ್ಷ ಕಾರ್ಯಾಚರಣೆ, ವಾಹನ ಸಮೇತ ಆರೋಪಿಗಳು ಜೈಲಿಗೆ
0Shares

ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜಾರ್‌ ಜಂಕ್ಷನ್‌ ಬಳಿ ಕಾರ್ಕಳ ತಾಲೂಕಿನ ಕುಕ್ಕುಜೆ ಬಳಿಯಿಂದ ದನಕಳ್ಳತನ ಮಾಡಿ ವಧೆಗಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ದಸ್ತಗಿರಿ ಮಾಡಿ ವಾಹನವನ್ನು ಸ್ವಾಧೀನಪಡಿಸಿಕೊಂಡು, ದನ ಹಾಗೂ ಕರುವನ್ನು ರಕ್ಷಿಸಿದ ಹಿರಿಯಡಕ ಪೊಲೀಸರು

ದಿನಾಂಕ: 09/10/2026 ರಂದು ಸಂಜೆ 19:30 ಗಂಟೆಗೆ ಠಾಣಾ ಅಪರಾದ ಪತ್ತೆ ವಿಭಾಗದ ಪೊಲೀಸರಿಗೆ ಭಾತ್ಮೀದಾರರು ನೀಡಿದ ಮಾಹಿತಿಯಂತೆ ಹರಿಖಂಡಿಗೆ ಕಡೆಯಿಂದ ಹಿರಿಯಡಕ ಕಡೆಗೆ KA 20 AA 5197 ನೇ ಗೂಡ್ಸ್‌ ಟೆಂಪೋ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡಿಕೊಂಡು ಬರುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಬೊಮ್ಮಾರಬೆಟ್ಟು ಗ್ರಾಮದ ಕೊಟ್ನಕಟ್ಟೆ ಬಳಿ ಇರುವಾಗ ಹಿರಿಯಡ್ಕ ಕಡೆಗೆ KA 20 AA 5197 ಗೂಡ್ಸ್‌ ಟೆಂಪೊ ಬರುತ್ತಿದ್ದನ್ನು ನೋಡಿ ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೇ ಮುಂದೆ ಸಾಗಿ ಬಂದಿದ್ದು ಕೂಡಲೇ ಠಾಣೆಗೆ ಕರೆ ಮಾಡಿ ನೊಂದಣಿ ಸಂಖ್ಯೆ ತಿಳಿಸಿ ಠಾಣೆಯ ಎದುರು ಟೆಂಪೋವನ್ನು ನಿಲ್ಲಿಸಲು ತಿಳಿಸಿದ್ದು ಆಗ ಠಾಣಾ ಸಿಬ್ಬಂದಿಯವರಾದ ಹೆಚ್‌ ಸಿ ಪ್ರವೀಣ್‌ ರೈ ಪಿಸಿ ಚನ್ನೇಶ ರವರು ಅಂಜಾರು ಗ್ರಾಮದ ಹಿರಿಯಡ್ಕ ಠಾಣೆಯ ಎದುರು ಜಂಕ್ಷನ್‌ ಬಳಿ KA 20 AA 5197 ಟೆಂಪೋವನ್ನು ತಡೆದು ನಿಲ್ಲಿಸಿ ನೋಡಿದಾಗ ವಾಹನದ ಒಳಗೆ ಒಟ್ಟು 4 ಜಾನುವಾರಗಳು ಇದ್ದವು. ವಾಹನದ ಚಾಲಕ ಸೇರಿ ಇಬ್ಬರು ವ್ಯಕ್ತಿಗಳಿದ್ದರು. ಹೆಸರು ವಿಳಾಸ ವಿಚಾರಿಸಲು ಅವರ ಪೈಕಿ ಒಬ್ಬನು 1) ಅಬ್ದುಲ್‌ ಸತ್ತರ್‌ ಪ್ರಾಯ: 54 ವರ್ಷ, ಸರ್ಕಾರಿಗುಡ್ಡೆ, ಸುಭಾಷ್ ನಗರ, ಕುರ್ಕಾಲು ಗ್ರಾಮ ಕಾಪು 2) ಯೋಗೀಶ ನಾಯ್ಕ್‌ ಪ್ರಾಯ: 49 ವರ್ಷ, ಮಾಳದ ಬೆಟ್ಟು, ಇನ್ನಂಜೆ ಗ್ರಾಮ, ಕಾಪು ತಾಲೂಕು ಅಂತಲೂ ಮತ್ತು ವಾಹನ ತನ್ನದೇ ಆಗಿರುತ್ತದೆ ಎಂದು ಹೇಳಿರುತ್ತಾನೆ. ವಾಹನದ ಒಳಗೆ ಇದ್ದ ಜಾನುವಾರುಗಳ ಬಗ್ಗೆ ವಿಚಾರಣೆ ಮಾಡಿದಾಗ ಜಾನುವಾರುಗಳನ್ನು ಕಾರ್ಕಳ ತಾಲೂಕು ಕುಕ್ಕುಜೆ ಗ್ರಾಮದ ಪಲಬೆಟ್ಟು ನಿವಾಸಿ ಕೃಷ್ಣ ಪೂಜಾರಿ ಎಂಬವರ ಮನೆಯ ಹತ್ತಿರ ಮೇಯುತ್ತಿದ್ದ ಜಾನುವಾರುಗಳನ್ನು ಕಳವು ಮಾಡಿ ಅವುಗಳನ್ನು ನಾವು ತಂದಿದ್ದ ಪಿಕಪ್‌ ಗೂಡ್ಸ್ ವಾಹನದಲ್ಲಿ ಕಸಾಯಿಖಾನೆಗೆ ಮಾರಾಟ ಮಾಡಲು ಕೊಂಡು ಹೋಗುವುದಾಗಿಯೂ ತಿಳಿಸಿರುತ್ತಾರೆ. ಸದ್ರಿ ಜಾನುವಾರುಗಳ ಮೌಲ್ಯ ಸುಮಾರು 20000/- ರೂಪಾಯಿ ಆಗಬಹುದು ಸದ್ರಿ ಗೂಡ್ಸ್ ವಾಹನದ ಮೌಲ್ಯ ಸುಮಾರು ಮೂರು ಲಕ್ಷ ರೂಪಾಯಿ ಆಗಬಹುದು ತಿಳಿಸಿದ್ದು, ಈ ಜಾನುವಾರುಗಳಿಗೆ ಹಿಂಸೆ ಆಗುವ ರೀತಿಯಲ್ಲಿ ಅವುಗಳ ಕುತ್ತಿಗೆಗೆ ಮತ್ತು ಕಾಲುಗಳಿಗೆ ನೈಲಾನ್‌ ಹಗ್ಗವನ್ನು ಕಟ್ಟಿ ಹಿಂಸಾತ್ಮಾಕವಾಗಿ ಪಿಕಪ್ ಗೂಡ್ಸ್ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ತುಂಬಿಸಿಕೊಂಡು ಅವುಗಳನ್ನು ವಧೆ ಮಾಡುವ ಸಲುವಾಗಿ ಕಸಾಯಿಖಾನೆಗೆ ತೆಗೆದು ಕೊಂಡು ಹೋಗುತ್ತಿರುವುದಾಗಿ ತಿಳಿದು ಬಂದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿದೆ.

ಆರೋಪಿಗಳ ವಿರುದ್ದ ಹಿರಿಯಡಕ ಠಾಣಾ ಅಪರಾಧ ಕ್ರಮಾಂಕ : 59/2026 , ಕಲಂ: 303(2) BNS & ಕಲಂ:11(1) ಡಿ ಪ್ರಾಣಿಹಿಂಸಾ ಪ್ರತಿಭಂಧಕ ಕಾಯ್ದೆ ಮತ್ತು ಸೆಕ್ಷನ್ 4, 5, 7,12 ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ, ಪೊಲೀಸ್ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ನೇತೃತ್ವದಲ್ಲಿ , ಪುನಿತ್‌ ಕುಮಾರ್‌ ಬಿ.ಈ ಪಿ.ಎಸ್.ಐ (ಕಾ.ಸು). ಹಾಗೂ ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now