1 ವರ್ಷದಿಂದ ಪರಾರಿಯಾಗಿದ್ದ ಆರೋಪಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ ಮಣಿಪಾಲ ಪೊಲೀಸರು

1 ವರ್ಷದಿಂದ ಪರಾರಿಯಾಗಿದ್ದ ಆರೋಪಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ ಮಣಿಪಾಲ ಪೊಲೀಸರು
0Shares

ಮಣಿಪಾಲ ಠಾಣಾ ಅ.ಕ್ರ ನಂ 92-2025 ಕಲಂ: 143 BNS ಮತ್ತು 3,4,5,6 Immoral Traffic (Prevention) Act 1956 ಪ್ರಕರಣದಲ್ಲಿ ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪವಿಭಾಗದವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾದ ಮಹೇಶ ಪ್ರಸಾದ ಪೊಲೀಸ್ ನಿರೀಕ್ಷಕರು ಮಣಿಪಾಲ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪ್ರಕರಣದಲ್ಲಿ ಸುಮಾರು 1 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿಗಳಾದ ಎಸ್ತಾರ್ ಶಾಹ @ ಕಾಜಲ್ ಯಾನೆ ಕಾಜಲ್ ಪ್ರಾಯ 40 ವರ್ಷ ಗಂಡ:ಸಂಜಯ ಸಹ ವಾಸ- 8-190 ಅರಬಿಂದ ಸರಾನಿ ಕಾಳಿದಾಮ್ ಕಾಲೋನಿ ಪಿ.ಎಸ್ ಡಮ್ ಡಮ್ ಅಂಚೆ ನಾರ್ತ 24 ಪರಗಣ ಕೊಲ್ಕತ್ತಾ ಪಶ್ಚಿಮ ಬಂಗಾಲ 700028 2) ಸಂಜಯ ಸಹ ಪ್ರಾಯ 49 ವರ್ಷ ತಂದೆ . ಕ್ಷಿತೇಂದ್ರ ನಾಥ ಸಹ ವಾಸ- 8-190 ಅರಬಿಂದಾ ಸರಾನಿ ಕಾಲಿದಾಮ್ ಕಾಲೋನಿ ಪಿ ಎಸ್ ಡಮ್ ಡಮ್ ಅಂಚೆ ನಾರ್ತ 24 ಪರಗಣ ಪಶ್ಚಿಮ ಬಂಗಾಳ -700028 ಪತ್ತೆಯ ಬಗ್ಗೆ ಠಾಣಾ ಪಿಎಸ್.ಐ ತಿಮ್ಮೇಶ್. ಬಿ.ಎನ್ ರವರನ್ನು ಸಹಾಯಕ ತನಿಖಾಧಿಕಾರಿಯಾಗಿ ನೇಮಿಸಿದ್ದು ಅದರಂತೆ ಅವರು ಠಾಣಾ ಸಿಬ್ಬಂದಿಯವರಾದ ಹೆಚ್ ಸಿ ಸುರೇಶ ಶೆಟ್ಟಿ ಹೆಚ್.ಸಿ ಚೇತನ್ ಪಿ ಸಿ ರವಿರಾಜ್, ಮ.ಹೆಚ್.ಸಿ ಜ್ಯೋತಿ ನಾಯಕ್ ಹಾಗೂ ಮ.ಪಿ.ಸಿ ಸುಮಲತರವರುಗಳೊಂದಿಗೆ ವಿಶೇಷ ಕರ್ತವ್ಯದಲ್ಲಿ ಪಶ್ಚಿಮ ಬಂಗಾಳ ರಾಜ್ಯದ ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿಯ ನೇತಾಜಿ ನಗರ ಎಂಬಲ್ಲಿ ಇರುವುದಾಗಿ ದೊರೆತ ಖಚಿತ ಮಾಹಿತಿಯಂತೆ, ದಿನಾಂಕ:03/11/2026 ರಂದು ಬೆಳಿಗ್ಗೆ 11.00 ಘಂಟೆಗೆ ಆರೋಪಿಗಳಿರುವ ಸ್ಥಳಕ್ಕೆ ತಲುಪಿ ಆರೋಪಿತರಾದ ಎಸ್ತಾರ್ ಸಹ @ ಕಾಜಲ್ ಮತ್ತು ಸಂಜಯ ಸಹ ಇವರುಗಳನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿ, ಮಾನ್ಯ Ld.ACJM Court West Bengal State ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ದಿನಾಂಕ: 07/11/2026 ರಂದು ಮಾನ್ಯ ಉಡುಪಿ ಎರಡನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತರುಗಳಿಗೆ ದಿನಾಂಕ:11/11/2026 ರ ತನಕ ನ್ಯಾಯಾಂಗ ಬಂಧನವಿದಿಸಿರುತ್ತಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now