
ಕೊಳಲಗಿರಿ : ಇಲ್ಲಿಯ ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಗಿರಿ ಇದರ ಸ್ತ್ರೀ ಸಂಘಟನೆಯ ವತಿಯಿಂದ ಆಟಿಡೊoಜಿ ದಿನಾಚರಣೆಯನ್ನು ಆದಿತ್ಯವಾರ ಆಗಸ್ಟ್ 23, ರಂದು ಚರ್ಚ್‌ನಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.
ಸೆಂಟ್ ಮೋನಿಕಾ ಹಬ್ಬದ
ಬಲಿಪೂಜೆಯ ನಂತರ ಸ್ತ್ರೀ ಸಂಘಟನೆಯ ಸದಸ್ಯರು ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿಕೊಂಡು ಬಂದ ಆಟಿಡೊOಜಿ ದಿನದ ಸಾಂಪ್ರದಾಯಿಕ ಆಹಾರವನ್ನು ಎಲ್ಲಾ ಭಕ್ತರಿಗೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಚರ್ಚ್‌ನ ಧರ್ಮಗುರುಗಳಾದ ವಂ. ಫಾ. ಜೋಸೆಫ್ ಮಚಾದೊ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಡೋನ್ ಮೆಂಡೋನ್ಸಾ, ಕಾರ್ಯದರ್ಶಿ ಜೆಸಿಂತಾ ಡಿಸೋಜಾ ಹಾಗೂ ಆಯೋಗಗಳ ಸಂಚಾಲಕಿ ಸಾರಾ ಡಿಸೋಜ, ಸ್ತ್ರೀ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now