
ಮೂಡುಬೆಳ್ಳೆ ಲಯನ್ಸ್ ವತಿಯಿಂದ ವೃದ್ಧಾಶ್ರಮಕ್ಕೆ ಅಕ್ಕಿ ಚೀಲ ವಿತರಣೆ*
ಮೂಡುಬೆಳ್ಳೆ, ಆಗಸ್ಟ್ 23: ಸಾಮಾಜಿಕ ಜವಾಬ್ದಾರಿಯ ಅಂಗವಾಗಿ ಲಯನ್ಸ್ ಕ್ಲಬ್ ಮೂಡುಬೆಳ್ಳೆ ವತಿಯಿಂದ ಪಂಗಳ ಗುಡ್ಡೆಯಲ್ಲಿರುವ ಆಸರೆ ವೃದ್ಧಾಶ್ರಮಕ್ಕೆ 26 ಕೆ.ಜಿ. ತೂಕದ ಅಕ್ಕಿ ಚೀಲವನ್ನು ಉಚಿತವಾಗಿ ವಿತರಿಸಲಾಯಿತು.
ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ಹಿರಿಯ ಜೀವಿಗಳೊಂದಿಗೆ ಆತ್ಮೀಯವಾಗಿ ಸಮಯ ಕಳೆಯುವುದರ ಜೊತೆಗೆ, ಅಗತ್ಯವಿದ್ದ ಧಾನ್ಯದ ಸಹಾಯವನ್ನು ಹಸ್ತಾಂತರಿಸಿದರು. ಸಮಾಜದ ಹಿರಿಯ ನಾಗರಿಕರ ಅಗತ್ಯಗಳಿಗೆ ಸ್ಪಂದಿಸುವ ಮೂಲಕ ಮಾನವೀಯತೆ ಹಾಗೂ ಸಾಮಾಜಿಕ ಬದ್ಧತೆಯನ್ನು ಮೆರೆದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಮೂಡುಬೆಳ್ಳೆಯ ಅಧ್ಯಕ್ಷರಾದ ಲ. ವಿವೇಕ್ ಪೈ, ಕಾರ್ಯದರ್ಶಿ ಐವನ್ ಮಿನೇಜಸ್, ಲ. ರಾಜೇಂದ್ರ ಶೆಟ್ಟಿ ಸೇರಿದಂತೆ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now