
ಮುಂಬಯಿ, ಅ.೦೯: ಸರಳತೆ, ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮಿ, ಎಂದಿಗೂ ತಮ್ಮನ್ನು ಅತಿಯಾಗಿ ಪ್ರದರ್ಶಿಸಿಕೊಳ್ಳದೆ, ಎಲ್ಲರೊಂದಿಗೂ ಪ್ರೀತಿ ಮತ್ತು ಆತ್ಮೀಯತೆಯಿಂದ ನಡೆದುಕೊಳ್ಳುವ ಅವರು, ಯಾರಿಗೂ ಕೆಟ್ಟದ್ದನ್ನು ಬಯಸದೆ, ಎಲ್ಲರನ್ನೂ ಸಮಾನವಾಗಿ ಗೌರವಿಸುವ ಉದಾತ್ತ ಗುಣವನ್ನು ಹೊಂದಿರುವ ಅಪರೂಪದ ವ್ಯಕ್ತಿತ್ವ ಅವರದು ಎಂದು ಬಿಲ್ಲವರ ಅಸೋಸಿಯೇಷನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅಮೀನ್ ಮಾತನಾಡಿದರು.
ಹರೀಶ್ ಪೂಜಾರಿ ಕೊಕ್ಕರ್ಣೆ ಅಭಿಮಾನಿ ವೃಂದ ಮುಂಬಯಿ ಆಶ್ರಯದಲ್ಲಿ ಮಹಾನಗರದ ಹಿರಿಯ ಸಮಾಜ ಸೇವಕ, ಲೇಖಕ, ಶಿಕ್ಷಣ ಪ್ರೇಮಿ, ಅಕ್ಷಯ ಮಾಸಿಕದ ವ್ಯವಸ್ಥಾಪಕ ಸಂಪಾದಕ ಹರೀಶ್ ಜಿ. ಪೂಜಾರಿ ಕೊಕ್ಕರ್ಣೆ ಇವರ ಎಂಭತ್ತನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ ಕೊಕ್ಕರ್ಣೆಯಕಿರಣ ಆತ್ಮಕಥನ ಬಿಡುಗಡೆ ಸಮಾರಂಭವು ಕಳೆದ ಬುಧವಾರ (ಅ.೦೭) ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಹರೀಶ್ ಜಿ.ಅಮೀನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಗೌರವ ಅಧ್ಯಕ್ಷ ಎಲ್. ವಿ . ಅಮೀನ್ ಅವರ ಗೌರವ ಉಪಸ್ಥಿತಯಲ್ಲಿ ಮುಖ್ಯ ಅತಿಥಿsಯಾಗಿ ಬಿಲ್ಲವರ ಚೇಂಬರ್ ಆಫ್ ಕಾಮರ್ಸ್ ಕಾರ್ಯಾಧ್ಯಕ್ಷ ಎನ್ . ಟಿ ಪೂಜಾರಿ ಉಪಸ್ಥಿತರಿದ್ದು, ಖ್ಯಾತ ಸಂಶೋಧಕ ಮತ್ತು ಸಾಹಿತಿ ಬಾಬು ಶಿವ ಪೂಜಾರಿ, ಡಾ| ಧೀರಜ್ ಹರೀಶ್ ಪೂಜಾರಿ ಯುಎಸ್‌ಎ, ’ಸಾಫಲ್ಯ’ ತ್ರೈಮಾಸಿಕದ ಸಂಪಾದಕಿ ಜಿ. ಪಿ. ಕುಸುಮಾ, ಭಾರತ್ ಬ್ಯಾಂಕ್‌ನ ಮಾಜಿ ನಿರ್ದೇಶಕಿ ಶಾರದಾ ಎಸ್.ಕರ್ಕೇರ, ಬಿಲ್ಲವರ ಅಸೋಸಿಯೇಶನ್ ಮುಂಬಯಯ ಉಪಾಧ್ಯಕ್ಷರುಗಳಾದ ಪುರುಷೋತ್ತಮ ಎಸ್.ಕೋಟ್ಯಾನ್, ಜಯಂತಿ ವಿ.ಉಳ್ಳಾಲ್, ಕೆ.ಸುರೇಶ್ ಕುಮಾರ್, ಮೋಹನ್ ಸಿ.ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ರವಿ ಎಸ್. ಸನಿಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಮುಖ್ಯ ಸಂಪಾದಕ ಡಾ. ಈಶ್ವರ್ ಅಲೆವೂರು ಉಪಸ್ಥಿತರಿದ್ದು ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿ, ಹುಟ್ಟುಹಬ್ಬದ ನಿಮಿತ್ತ ಹರೀಶ್ ಪೂಜಾರಿ ಕೊಕ್ಕರ್ಣೆ ಮತ್ತು ಸುಗುಣಾ ಪೂಜಾರಿ ದಂಪತಿಯನ್ನು ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.
ಅಕ್ಷಯ ಮಾಸಪತ್ರಿಕೆಯ ಸಂಪಾದಕ ಕೆ.ಹರೀಶ್ ಹೆಜ್ಮಾಡಿ ಅಭಿನಂದನಾ ಭಾಷಣಗೈದರು. ಜೊತೆ ಕೋಶಾಧಿಕಾರಿ ಕೇಶವ ಕೆ.ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಪ್ರಸಂಗಕರ್ತ ಎಂ.ಟಿ. ಪೂಜಾರಿ ಪೂಜಾರಿ ನಿರ್ದೇಶನದಲ್ಲಿ ಡಾ. ಸೇಜನ್ನ ನಿನ್ನನೆ ಮತ್ತು ಅಂಕಿತಾ ನಾಯ್ಸ್ ಚಿಕ್ಕ ಮೇಳ ಯಕ್ಷಗಾನ ಪ್ರದರ್ಶನದ ಮೂಲಕ ಹರೀಶ್ ಪೂಜಾರಿ ಕೊಕ್ಕರ್ಣೆ ಅವರ ಜೀವನ ಚರಿತ್ರೆಯನ್ನು ಪ್ರದರ್ಶಿಸಲಾಯತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now