
ಕಾರ್ಕಳ, ಅಕ್ಟೋಬರ್ 8: ವಿಶ್ವ ಸೇವಾ ಸಪ್ತಾಹದ ಅಂಗವಾಗಿ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲಾ 317Cಯ ವತಿಯಿಂದ ‘ಒಂದು ಜಿಲ್ಲೆ ಒಂದು ಚಟುವಟಿಕೆ’ (One District One Activity) ಸೇವಾ ಯೋಜನೆಯಡಿ ‘REJOICE’ ಕಾರ್ಯಕ್ರಮವನ್ನು ಕಣಂಜಾರು, ಬೈಲೂರಿನ ಹೊಸಬೆಳಕು ಸೇವಾಶ್ರಮದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾ ಗವರ್ನರ್ ಎಂ.ಜೆ.ಎಫ್. ಲಯನ್ ರಾಜೀವ್ ಕೋಟ್ಯಾನ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಶ್ರಮದ ನಿವಾಸಿಗಳಿಗೆ ಅಗತ್ಯ ವಸ್ತುಗಳು ಹಾಗೂ ಆಹಾರ ಕಿಟ್ಗಳನ್ನು ವಿತರಿಸುವ ಮೂಲಕ ಮಾನವೀಯ ಸೇವೆಯ ಸಂದೇಶ ಸಾರಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಒಂದು ಜಿಲ್ಲೆ ಒಂದು ಚಟುವಟಿಕೆ’ಯ ಮುಖ್ಯ ಸಂಯೋಜಕ ಲಯನ್ ಏಕನಾಥ್ ಬೋಳಾರ್ ವಹಿಸಿದ್ದರು. ಪ್ರಥಮ ಉಪಜಿಲ್ಲಾ ಗವರ್ನರ್ ಲಯನ್ ಹರಿಪ್ರಸಾದ್ ರೈ ಅವರು ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದ್ವಿತೀಯ ಉಪಜಿಲ್ಲಾ ಗವರ್ನರ್ ಲಯನ್ ಇಂಜಿನಿಯರ್ ರಾಮಾನಂದ ಕೆ. ಅವರು ಜಾಗತಿಕ ಸೇವಾ ಸಪ್ತಾಹದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಗವರ್ನರ್ ಲಯನ್ ರಾಜೀವ್ ಕೋಟ್ಯಾನ್ ಅವರು, ಜಿಲ್ಲಾ 317Cಯ 45 ಲಯನ್ಸ್ ಕ್ಲಬ್ಗಳು ಈ ಸೇವಾ ಯೋಜನೆಯಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ ಎಂದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಲಯನ್ಸ್ ಸಂಸ್ಥೆಯ ಮೂಲಕ ನೆರವು ತಲುಪಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದ್ದು, ಸೇವಾ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಎಲ್ಲ ಕ್ಲಬ್ಗಳು ಕೈಜೋಡಿಸಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.

300ಕ್ಕೂ ಹೆಚ್ಚು ಅನಾಥರು ಮತ್ತು ನಿರಾಶ್ರಿತರಿಗೆ ಆಶ್ರಯ ನೀಡುತ್ತಿರುವ ಹೊಸಬೆಳಕು ಸೇವಾಶ್ರಮವು ಸಮಾಜದ ವಿವಿಧ ಸ್ತರಗಳ ಸಂಕಷ್ಟದಲ್ಲಿರುವ ಜನರಿಗೆ ಆಸರೆಯಾಗಿದೆ. ಇಂತಹ ಸಂಸ್ಥೆಗಳಿಗೆ ನೆರವು ನೀಡುವ ಮೂಲಕ ಮಾನವೀಯತೆ, ಕರುಣೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬಲಪಡಿಸುವುದು ಲಯನ್ಸ್ ಸಂಸ್ಥೆಯ ಪ್ರಮುಖ ಆಶಯವಾಗಿದೆ.
ಕಾರ್ಯಕ್ರಮದಲ್ಲಿ ಪಿಡಿಜಿ ಹಾಗೂ ಜಿಲ್ಲಾ ಸಲಹೆಗಾರ ಲಯನ್ ಜಯಕರ ಶೆಟ್ಟಿ ಇಂದ್ರಾಳಿ, ಪಿಡಿಜಿ ಹಾಗೂ ಕಾರ್ಯಕ್ರಮ ಮಾರ್ಗದರ್ಶಕ ಲಯನ್ ಇಂಜಿನಿಯರ್ ಎನ್. ಎಂ. ಹೆಗ್ಡೆ, ಜಿಲ್ಲಾ ಸಲಹೆಗಾರ ಲಯನ್ ಬಿ. ಅರುಣ್ ಕುಮಾರ್ ಹೆಗ್ಡೆ, ಸೇವಾ ವಿಭಾಗದ ಮುಖ್ಯ ಸಂಯೋಜಕ ಲಯನ್ ದಿನಕರ ಶೆಟ್ಟಿ ಎಂ., ಕಾರ್ಯಕ್ರಮಗಳ ಕ್ಯಾಲೆಂಡರ್ ಮುಖ್ಯ ಸಂಯೋಜಕ ಲಯನ್ ರಜತ್ ಹೆಗ್ಡೆ, ಜಿಎಸ್ಟಿ ಸಂಯೋಜಕಿ ಲಯನ್ ಶಾಲಿನಿ ಬಂಗೇರ, ಹೊಸಬೆಳಕು ಆಶ್ರಮದ ಮೇಲ್ವಿಚಾರಕಿ ತನುಲಾ ತರುಣ್, ಲಯನ್ ಉದಯ ಕುಮಾರ್ ಶೆಟ್ಟಿ ಹಾಲಾಡಿ, ಲಯನ್ ಗಣೇಶ್ ಸುವರ್ಣ, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಸದಾನಂದ ನಾವಡ ಹಾಗೂ ಜಿಲ್ಲಾ ಸಂಪುಟ ಖಜಾಂಚಿ ಲಯನ್ ವಿನೋದ ನಾರಾಯಣ್ ಉಪಸ್ಥಿತರಿದ್ದರು.

‘ಒಂದು ಜಿಲ್ಲೆ ಒಂದು ಚಟುವಟಿಕೆ’ ಜಿಲ್ಲಾ ಆಹಾರ ಕಿಟ್ ತಂಡದ ಲಯನ್ ಜಿ. ಆರ್. ಪ್ರಕಾಶ್, ಲಯನ್ ಪ್ರಭಾಕರ್ ಎಚ್. ಕುಂದರ್, ಲಯನ್ ರಾಧಾಕೃಷ್ಣ ಮೆಂಡನ್, ಲಯನ್ ರವೀಂದ್ರನಾಥ ಹೆಗ್ಡೆ ಹಿರಿಯಡ್ಕ, ಲಯನ್ ವೈ. ಗೋಪಾಲ್ ಶೆಟ್ಟಿ ಹಾಗೂ ಲಯನ್ ಶಂಕರ್ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
45 ಲಯನ್ಸ್ ಕ್ಲಬ್ಗಳ ಸಹಭಾಗಿತ್ವ :‘REJOICE – ಒಂದು ಜಿಲ್ಲೆ ಒಂದು ಚಟುವಟಿಕೆ’ ಸೇವಾ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಲಯನ್ ರಾಜೀವ್ ಕೋಟ್ಯಾನ್, ಪ್ರಥಮ ಉಪಜಿಲ್ಲಾ ಗವರ್ನರ್ ಲಯನ್ ಹರಿಪ್ರಸಾದ್ ರೈ ಹಾಗೂ ದ್ವಿತೀಯ ಉಪಜಿಲ್ಲಾ ಗವರ್ನರ್ ಲಯನ್ ಇಂಜಿನಿಯರ್ ರಮಾನಂದ ಕೆ. ಅವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಲಯನ್ಸ್ ಕ್ಲಬ್ಗಳು ಭಾಗವಹಿಸಿ ತಮ್ಮ ಕೊಡುಗೆಗಳ ಮೂಲಕ ಸೇವಾ ಕಾರ್ಯಕ್ಕೆ ಬೆಂಬಲ ನೀಡಿದವು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದ 45 ಲಯನ್ಸ್ ಕ್ಲಬ್ಗಳು:
ಉಡುಪಿ ಬನ್ನಂಜೆ
ಬ್ರಹ್ಮಾವರ ಬಾರ್ಕೂರು
ಉಡುಪಿ ಲಕ್ಷ್ಯ
ತ್ರಾಸಿ ಗಂಗೊಳ್ಳಿ
ಕೆಮ್ಮಣ್ಣು
ಹಂಗ್ಲೂರು
ಬನ್ನಾಡಿ ವಡ್ಡರ್ಸೆ
ಬಂಟಕಲ್ ಬಿ.ಸಿ. ರೋಡ್
ಬಂಟಕಲ್ ಜಾಸ್ಮಿನ್
ಕಟಪಾಡಿ
ತೆಕ್ಕಟ್ಟೆ
ಉಡುಪಿ ಮೇನ್
ಮೂಡುಬೆಳ್ಳೆ
ಕುಂದಾಪುರ ಸಿಟಿ ಸೆಂಟರ್
ಕುಂದಾಪುರ ಎಂಜಿನಿಯರ್ಸ್
ಕೋಟೇಶ್ವರ
ಮೊಳಹಳ್ಳಿ ಶಿವಶಾಂತಿ
ಇಂದ್ರಾಳಿ
ತಲ್ಲೂರು
ಕೋಟ ಗಿಳಿಯಾರು
ಬೆಲ್ಮಣ್
ಕುಂದಾಪುರ ಅಮೃತಧಾರಾ
ಬೈಂದೂರು ಉಪ್ಪುಂದ
ನೀರೆ ಬೈಲೂರು
ಹಕ್ಲಾಡಿ ಚೆನ್ನಕೇಶವ
ಮುದರಂಗಡಿ
ಉಡುಪಿ ಅಮೃತ್
ಪರ್ಕಳ
ಮಣಿಪಾಲ
ಬ್ರಹ್ಮಗಿರಿ
ಉಡುಪಿ ಸಮೃದ್ಧಿ
ಹೆಬ್ರಿ ಸಿಟಿ
ಅಜೆಕಾರು
ಉಡುಪಿ ಬನ್ನಂಜೆ ಟೈಗರ್ಸ್
ಉದ್ಯಾವರ
ಕಲ್ಯಾಣಪುರ
ಕಾರ್ಕಳ ಸಿಟಿ
ಕಾರ್ಕಳ ಮೇನ್
ಉಡುಪಿ ಸೌತ್
ಹಿರಿಯಡ್ಕ
ಪೇತ್ರಿ
ಅರ್ಡಿ ಬೆಲ್ವೆ ಗೋಳಿಯಂಗಡಿ
ಕುಂದಾಪುರ ವೇಟ್ ಝೋನ್
ಕುಂದಾಪುರ ಕ್ರೌನ್
ಕುಂದಾಪುರ ಮೇನ್
ವಿಶ್ವ ಸೇವಾ ಸಪ್ತಾಹದ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮವು ಸೇವೆ, ಸಹಕಾರ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸಿತು. ಅಗತ್ಯವಿರುವವರಿಗೆ ನೆರವು ನೀಡುವ ಮೂಲಕ ಸಮಾಜದಲ್ಲಿ ಸೇವಾ ಮನೋಭಾವವನ್ನು ಬೆಳೆಸುವುದು ಹಾಗೂ ಲಯನ್ಸ್ ಕ್ಲಬ್ಗಳ ಒಗ್ಗಟ್ಟಿನ ಕಾರ್ಯಚಟುವಟಿಕೆಗಳನ್ನು ಬಲಪಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now