ಮುದರಂಗಡಿ ಉದ್ಯಮಿ ಡಿಸೋಜಾ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಮುಂಬೈನ ನಟೋರಿಯಸ್ ಗ್ಯಾಂಗ್‌ಸ್ಟರ್ ಅನುಜ್ ಪಾಟೀಲ್ ಸೆರೆ, ಪೊಲೀಸರ ಮೇಲೆ ಹಲ್ಲೆ – ಆತ್ಮರಕ್ಷಣೆಗಾಗಿ PSI ಫೈರಿಂಗ್*

ಮುದರಂಗಡಿ ಉದ್ಯಮಿ ಡಿಸೋಜಾ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಮುಂಬೈನ ನಟೋರಿಯಸ್ ಗ್ಯಾಂಗ್‌ಸ್ಟರ್ ಅನುಜ್ ಪಾಟೀಲ್ ಸೆರೆ, ಪೊಲೀಸರ ಮೇಲೆ ಹಲ್ಲೆ – ಆತ್ಮರಕ್ಷಣೆಗಾಗಿ PSI ಫೈರಿಂಗ್*
0Shares

ದಿನಾಂಕ 07/08/2026 ರಂದು ಮಧ್ಯಾಹ್ನ 3:45 ಗಂಟೆಗೆ ಕಾಪು ತಾಲೂಕು ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್‌ ಕಾಂಪ್ಲೆಕ್ಸ್‌ ನಲ್ಲಿ ಪ್ರಿನ್ಸ್ ಎಂಟರ್ಪ್ರೈಸಸ್ ನ ಮಾಲಕ ಡೇವಿಡ್ ಡಿಸೋಜಾ ಎಂಬವರನ್ನು ಮೋಟಾರು ಸೈಕಲಿನಲ್ಲಿ ಬಂದ ಆರೋಪಿತರ ಪೈಕಿ ಸಹಸವಾರನು ಪಿಸ್ತೂಲ್ ನಿಂದ ಡೇವಿಡ್ ಡಿಸೋಜಾರವರ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ ಬಗ್ಗೆ ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಪ್ರಕರಣದ ತನಿಖೆ ಸಂಬಂಧ ನಂಜ ನಾಯಕ್ ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಠಾಣೆ ಮತ್ತು ವಿನಯ್, ಪೊಲೀಸ್ ಉಪನಿರೀಕ್ಷಕರು ಕೊಲ್ಲೂರು ಠಾಣೆ ಮತ್ತು ತಂಡ ಈ ದಿನ ಬೆಳಿಗ್ಗೆ 6-6.30 ಸಮಯದಲ್ಲಿ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡೇವಿಡ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ಮೂವರು ಶೂಟರ್ ಗಳನ್ನು ಕಳುಹಿಸಿದ ಆರೋಪಿ ಮುಂಬೈನ ನಟೋರಿಯಸ್ ಗ್ಯಾಂಗ್ ಸ್ಟರ್ ಅನುಜ್ ಪಾಟೀಲ್(35)
ಸಾರ್ಮರ್, ನಳಂದ, ಬಿಹಾರ ಈತನನ್ನು ದಸ್ತಗಿರಿ ಮಾಡಲಾಗಿರುತ್ತದೆ. ಆರೋಪಿಯನ್ನು ದಸ್ತಗಿರಿ ಮಾಡಿ ಕರೆದುಕೊಂಡು ಬರುವ ಸಮಯದಲ್ಲಿ ಪೊಲೀಸ್ ಸಿಬ್ಬಂದಿಯವರ ಮೇಲೆ ಹಲ್ಲೆ ನಡೆಸಿ, ಕೊಲ್ಲೂರು ಠಾಣೆ ಪಿಎಸ್ಐ ವಿನಯ್ ರವರ ಆಯುಧವನ್ನು ಕಸಿದು, ಫೈಯರ್ ಮಾಡಿದ್ದು, ಈ ಸಮಯದಲ್ಲಿ ಕುಂದಾಪುರ ಪೊಲೀಸ್ ಉಪನಿರೀಕ್ಷಕರಾದ ನಂಜ ನಾಯಕರವರು ಆತ್ಮ ರಕ್ಷಣೆಗಾಗಿ ಆರೋಪಿಯ ಕಾಲಿಗೆ ಫೈಯರ್ ಮಾಡಿರುತ್ತಾರೆ. ಆರೋಪಿಯನ್ನು ಚಿಕಿತ್ಸೆಗಾಗಿ ಉಡುಪಿಯ ಅಜ್ಜರ ಕಾಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಆರೋಪಿಯು ಮುಂಬೈ ನಲ್ಲಿ ಕಾರ್ಯಾಚರಿಸುತ್ತಿದ್ದು 2017 ರಿಂದ ತಲೆಮರಿಸಿಕೊಂಡಿರುತ್ತಾನೆ. ಈತನ ವಿರುದ್ಧ ಮಹಾರಾಷ್ಟ್ರದಲ್ಲಿ MCOCA ಕಾಯ್ದೆ ದಾಖಲಿಸಲಾಗಿರುತ್ತದೆ. ಇತನ ವಿರುದ್ಧ ಒಟ್ಟು 11 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 10 ಪ್ರಕರಣಗಳಲ್ಲಿ 10 ಪ್ರಕರಣಗಳು Arms act ಪ್ರಕರಣಗಳಾಗಿರುತ್ತದೆ. ಮಹಾರಾಷ್ಟ್ರದಲ್ಲಿ ನಾಲ್ಕು, ಗುಜರಾತ್ ನಲ್ಲಿ ಐದು, Daman And Diuನಲ್ಲಿ ಒಂದು, ಕರ್ನಾಟಕದಲ್ಲಿ ಒಂದು ಪ್ರಕರಣ ದಾಖಲಾಗಿರುತ್ತದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now