
ಕಾಪು ಅಲ್ ರಿಹಾ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಹೆಚ್. ಅಬ್ದುಲ್ಲಾ ಮತ್ತು ಕಾರ್ಯದರ್ಶಿ ಶ್ರೀ ಹುಸೈನ್ ಅವರನ್ನು 2025-26 ರಲ್ಲಿ ಕಾಪು ಅಲ್ ರಿಹಾ ಬ್ಯಾಂಕ್ ಮಾಡಿದ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ಧ.ಕ. ಜಿಲ್ಲಾ ಸಹಕಾರಿ ಬ್ಯಾಂಕಿನ 2025-26 ರ ಮಹಾಸಭೆಯಲ್ಲಿ ಅಧ್ಯಕ್ಷರಾದ ಡಾ. ಶ್ರೀ ರಾಜೇಂದ್ರ ಕುಮಾರ್ ಅವರು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಶ್ರೀ ದೇವಿಪ್ರಸಾದ್ ಶೆಟ್ಟಿ, ಶ್ರೀ ಭಾಸ್ಕರ್ ಕೋಟ್ಯಾನ್, ಶ್ರೀ ವಾದಿರಾಜ ಶೆಟ್ಟಿ, ಶ್ರೀ ಮೋಹನಪ್ಪ ಶೆಟ್ಟಿ, ಶ್ರೀ ಅಶೋಕ್ ಶೆಟ್ಟಿ, ಶ್ರೀ ರಾಜೇಶ್ ರಾವ್ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರು ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಮತ್ತು ಉಡುಪಿ ಹಾಗೂ ಧ.ಕ. ಜಿಲ್ಲೆಯ ಸಹಕಾರಿ ಇಲಾಖೆಯ ಉಪ ನಿಬಂಧಕರುಗಳಾದ ಶ್ರೀ ರಮೇಶ್ ಮತ್ತು ಲಾವಣ್ಯ ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now