
ಬೆಂಗಳೂರು: ರಾಜ್ಯದಲ್ಲಿ ಹಲವು ಮಂದಿ ಹಠಾತ್ತನೆ ಕಾಣಿಸಿಕೊಳ್ಳುವ ಇನ್ಫ್ಲುಯೆನ್ನಾ ಸೋಂಕಿನ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇನ್ಫ್ಲುಯೆನ್ಹಾ ಜ್ವರದ ಪ್ರಮಾಣವು ಹೆಚ್ಚಳವಾಗಿದೆ ಎಂದು ಆತಂಕ ವ್ಯಕ್ತಪಡಿಸಿರುವ ಆರೋಗ್ಯ ಇಲಾಖೆಯು, ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ-ಸೂಚನೆಗಳನ್ನು ನೀಡಿದೆ
ಕರ್ನಾಟಕದಲ್ಲಿ ಪ್ರತಿ ವರ್ಷ ಮಳೆಗಾಲ (ಜೂನ್) ಬಂತೆಂದರೆ ಸಾಕು ನಾನಾ ಬಗೆಯ ಜ್ವರಗಳು ಉಲ್ಬಣಗೊಳ್ಳುತ್ತವೆ. ಆದರೆ, ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಇನ್ಫ್ಲುಯೆನ್ನಾ ಜ್ವರದಿಂದ ಬಳಲುವವರ ಪ್ರಮಾಣ ಹೆಚ್ಚಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಬಹುತೇಕರಲ್ಲಿ ಜ್ವರ, ನೆಗಡಿ, ಕೆಮ್ಮು, ಕಫದಿಂದ ಉಸಿರಾಟದ ಸಮಸ್ಯೆಯ ಲಕ್ಷಣಗಳು ಗೋಚರಿಸಿವೆ. ರಾಜ್ಯ ಸರ್ವೆಲೆನ್ಸ್ ಯುನಿಟ್ ಸಂಗ್ರಹಿಸಿರುವ ದತ್ತಾಂಶದ ಪ್ರಕಾರ, 2026 ಜನವರಿಯಿಂದ ಆ. 22ರವರೆಗೆ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಇನ್ಫ್ಲುಯೆನ್ಹಾ ದಿಂದ ಬಳಲಿದ್ದಾರೆ. ಇದರಲ್ಲಿ ಶೇ.50ರಷ್ಟು ಜನರಿಗೆ ಜುಲೈ-ಆಗಸ್ಟ್ ನಲ್ಲೇ ಜ್ವರ ಕಾಣಿಸಿಕೊಂಡಿದೆ.
2025ರಲ್ಲಿ ಆಗಸ್ಟ್ವರೆಗೆ 1,742 ಜನರಲ್ಲಿ ಇನ್ಫ್ಲುಯೆನ್ಹಾ ಕಾಣಿಸಿಕೊಂಡಿತ್ತು. ಇದರ ಜೊತೆಗೆ, ಡೆಂಘಿ, ಚಿಕೂನ್ಗುನ್ಯ ಜ್ವರಗಳೂ ಅಲ್ಲಲ್ಲಿ ಉಲ್ಬಣಗೊಳ್ಳುತ್ತಿವೆ. ಆದರೆ, ಇನ್ಫ್ಲುಯೆನ್ನಾ ಜ್ವರದಷ್ಟು ಹರಡಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now