ಕುಸ್ತಿಯಲ್ಲಿ ಕೆಪಿಎಸ್ ಕೋಟೇಶ್ವರದ ಬಾಲಕಿಯರ ಭರ್ಜರಿ ಸಾಧನೆ.

ಕುಸ್ತಿಯಲ್ಲಿ ಕೆಪಿಎಸ್ ಕೋಟೇಶ್ವರದ ಬಾಲಕಿಯರ ಭರ್ಜರಿ ಸಾಧನೆ.
0Shares

ತಾಲೂಕು ಮಟ್ಟದ ಪಂದ್ಯಾಟದಲ್ಲಿ ಸಮಗ್ರ ತಂಡ ಪ್ರಶಸ್ತಿ – 9 ಪ್ರಥಮ, 5 ದ್ವಿತೀಯ ಹಾಗೂ 3 ತೃತೀಯ ಸ್ಥಾನ.

ಕುಂದಾಪುರ: ಕುಂದಾಪುರ ತಾಲೂಕು ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಕೋಟೇಶ್ವರದ ವಿದ್ಯಾರ್ಥಿಗಳು ಅದ್ಭುತ ಪ್ರದರ್ಶನ ನೀಡಿ ಗಮನಾರ್ಹ ಸಾಧನೆ ಮಾಡಿದ್ದಾರೆ. ವಿಶೇಷವಾಗಿ ಬಾಲಕಿಯರ ತಂಡವು ವಿವಿಧ ತೂಕದ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸಮಗ್ರ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಛಾಯಾ (42 ಕೆ.ಜಿ.), ಶ್ರೀ ಸಾನ್ವಿ (54 ಕೆ.ಜಿ.) ಹಾಗೂ ಫಾತಿಮಾ ಜೋಯ (39 ಕೆ.ಜಿ.) ಪ್ರಥಮ ಸ್ಥಾನ ಗಳಿಸಿದರೆ, ನೇಸರ (33 ಕೆ.ಜಿ.) ತೃತೀಯ ಸ್ಥಾನ ಪಡೆದರು.
17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅನನ್ಯ (40 ಕೆ.ಜಿ.), ಮಾನ್ವಿ (46 ಕೆ.ಜಿ.), ಸಮೃದ್ಧಿ (69 ಕೆ.ಜಿ.) ಹಾಗೂ ಸೌಜನ್ಯಾ (73 ಕೆ.ಜಿ.) ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಮುತ್ತಿಟ್ಟರು. ಪ್ರಣಮ್ಯ (49 ಕೆ.ಜಿ.), ಸಂಜನಾ (61 ಕೆ.ಜಿ.) ಹಾಗೂ ಪಾವನಿ (65 ಕೆ.ಜಿ.) ದ್ವಿತೀಯ ಸ್ಥಾನ ಗಳಿಸಿದರೆ, ಅವನಿ (53 ಕೆ.ಜಿ.) ಮತ್ತು ಪ್ರಾರ್ಥನಾ (57 ಕೆ.ಜಿ.) ತೃತೀಯ ಸ್ಥಾನ ಪಡೆದರು.
14ರ ವಯೋಮಾನದ ಬಾಲಕರ ವಿಭಾಗದಲ್ಲಿ ರಿಜ್ವಾನ್ (53 ಕೆ.ಜಿ.) ಹಾಗೂ ಕಬೀರ್ (68 ಕೆ.ಜಿ.) ಪ್ರಥಮ ಸ್ಥಾನ ಗಳಿಸಿದರೆ, ಶ್ರೇಯಸ್ (38 ಕೆ.ಜಿ.) ದ್ವಿತೀಯ ಸ್ಥಾನ ಪಡೆದರು. 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಸಮರ್ಥ (51 ಕೆ.ಜಿ.) ದ್ವಿತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದರು.
ಒಟ್ಟಾರೆ ಕೆಪಿಎಸ್ ಕೋಟೇಶ್ವರದ ವಿದ್ಯಾರ್ಥಿಗಳು 9 ಪ್ರಥಮ, 5 ದ್ವಿತೀಯ ಹಾಗೂ 3 ತೃತೀಯ ಸ್ಥಾನಗಳನ್ನು ಪಡೆದು ಪಂದ್ಯಾಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಬಾಲಕಿಯರ ತಂಡವು ಸಮಗ್ರ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಶಿಕ್ಷಕ ವೃಂದ, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಪರಿಶ್ರಮ, ತರಬೇತಿ ಮತ್ತು ಕ್ರೀಡಾ ಮನೋಭಾವವೇ ಈ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದು ಶಾಲಾ ವಲಯ ಹರ್ಷ ವ್ಯಕ್ತಪಡಿಸಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now