ಬಂಟ್ವಾಳ: ರಾಜ್ಯ ಮಟ್ಟದ ಕರಾಟೆಗೆ ತೃಷಾ ಆಯ್ಕೆ

ಬಂಟ್ವಾಳ: ರಾಜ್ಯ ಮಟ್ಟದ ಕರಾಟೆಗೆ ತೃಷಾ ಆಯ್ಕೆ
0Shares

ಬಂಟ್ವಾಳ: ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಮಾರಿ ಸಿ. ಯೆನ್ ತೃಷಾ ಇವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಂಟ್ವಾಳ ಅರ್ಬಿಗುಡ್ಡೆ ಶ್ರೀಮತಿ ನಳಿನಿ ಚಂದ್ರಹಾಸ ಇವರ ಮಗಳಾದ ಸಿ. ಯೆನ್ ತೃಷಾ ಅರ್ಬಿಗುಡ್ಡೆ ಬಂಟ್ವಾಳ 10ನೇ ತರಗತಿಯನ್ನು ಪಿಎಂಶ್ರೀ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ದಡ್ಡಲಕಾಡು ಬಂಟ್ವಾಳ ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಹಲವಾರು ಕರಾಟೆ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆಕೊಂಡಿರುತ್ತಾಳೆ ಹಾಗೂ ಇದೀಗ ತಾಲೂಕು ಮಟ್ಟದಿಂದ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಈಗ ರಾಜ್ಯಮಟ್ಟಕ್ಕೆ ಪ್ರತಿನಿಧಿಸಲಿದ್ದಾಳೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now