
ಪಿರ್ಯಾದಿ ಪ್ರದೀಪ್ ಕೆ, ಉಡುಪಿ ಇವರು ಉಡುಪಿಯ ನಿರ್ಮಾಣ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ಕೆಲಸ ಮಾಡುತ್ತಿದ್ದು, ತನ್ನ ವಿವಾಹಕ್ಕಾಗಿ ಹುಡುಗಿಯನ್ನು ಹುಡುಕುತ್ತಿರುವಾಗ 2023ರ ಕೊನೆಯಲ್ಲಿ ಮತ್ತು 2024ರ ಜನವರಿಯಲ್ಲಿ ಕನ್ನಡ ಜೋಡಿ ಮೆಟ್ರಿಮೋನಿ ಆಪ್ ನಲ್ಲಿ ಬೆಂಗಳೂರಿನ ಬಸವೇಶ್ವರ ನಗರದ ಎಸ್ ಕಡಂಬಿ ವಿದ್ಯಾ ಕೇಂದ್ರದಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ, ಮೂಲತಃ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಬಡಬೆಟ್ಟು ಹೆಣ್ಬೇರು ನಿವಾಸಿ ನಾಗರತ್ನ H ಎಂಬುವವರ ಪರಿಚಯವಾಗಿದೆ.
ಫಿರ್ಯಾದಿಯು ಆಕೆಯ ವಿವಾಹ ಪ್ರಸ್ತಾಪವನ್ನು ನಿರಾಕರಿಸಿ ತನ್ನ ಜಾತಿಯ ಹೆಣ್ಣನ್ನು ಮದುವೆಯಾಗುವುದಾಗಿ ಹೇಳಿದ್ದರು. ನಂತರದ ದಿನಗಳಲ್ಲಿ ನಾಗರತ್ನಳು ಫಿರ್ಯಾದುದಾರರಿಗೆ ಫೋನ್ ಕರೆ ಹಾಗೂ ಮೆಸೇಜ್ ಮಾಡಿ ತನ್ನ ಕಷ್ಟಗಳನ್ನು ಹೇಳಿಕೊಂಡು ಹಂತ ಹಂತವಾಗಿ ಬೆದರಿಸಿ ಹಣ ವಸೂಲಿ ಮಾಡಿರುತ್ತಾಳೆ.
ಆರೋಪಿ ನಾಗರತ್ನಳು ತನ್ನ ಖಾತೆಗೆ ಹಾಗೂ ತಾನು ಕೆಲಸ ಮಾಡುವ ಸಹೋದ್ಯೋಗಿ ಹೇಮಂತ್ ಕರ್ಕೇರಾ, ಅವರ ಚಿಕ್ಕಮ್ಮನ ಮಗ ಪ್ರಮೋದ್ ಮತ್ತು ತನ್ನ ಅಕ್ಕ ರೇಣುಕಾ ಎಂಬುವವರ ಖಾತೆಗಳಿಗೆ ಜನವರಿ-2024 ರಿಂದ ಜನವರಿ-2026 ರ ನಡುವೆ ಸುಮಾರು ರೂ. 42,97,350/- ಹಣವನ್ನು ಬ್ಯಾಂಕ್ ಮೂಲಕ ಹಾಕಿಸಿಕೊಂಡಿರುತ್ತಾಳೆ.
ಹಣವನ್ನು ವಾಪಸ್ ಕೇಳಿದಾಗ “ನಿಮಗೂ ನನಗೂ ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಕೇಸ್ ದಾಖಲಿಸುತ್ತೇನೆ, ನಿಮ್ಮ ಕಚೇರಿಗೆ ಬಂದು ಸಿಬ್ಬಂದಿ ಮತ್ತು ಗ್ರಾಹಕರ ಎದುರು ಮಾನ ಹರಾಜು ಹಾಕುತ್ತೇನೆ, ನಿಮ್ಮ ಸಂಸ್ಥೆಯ ಹಣ ದುರುಪಯೋಗ ಮಾಡಿದ್ದೀರಿ ಎಂದು ಸುಳ್ಳು ಪತ್ರ ಬರೆದು ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಬೆದರಿಕೆ ಹಾಕಿರುತ್ತಾಳೆ.
ಈ ಬಗ್ಗೆ ಫಿರ್ಯಾದಿಯ ದೂರಿನ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ: 135/2026 ಕಲಂ: 61(2), 316(2), 318(2), 308(2), 308(6) r/w 3(5) BNS ರಂತೆ ಪ್ರಕರಣ ದಾಖಲಾಗಿದೆ.
ಆರೋಪಿತರ ಪತ್ತೆಗಾಗಿ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ಭರತೇಶ್ ಕಂಕಣವಾಡಿ ಪಿಎಸ್ಐ (ಕಾ&ಸು), ರತ್ನಾಕರ ಕೆ ಪಿಎಸ್ಐ (ತನಿಖೆ-2), ಹೆಚ್ ಸಿ ಪ್ರಸನ್ನ ಸಿ, ಹೆಚ್ ಸಿ ಜೀವನ್ ಕುಮಾರ್, ಹೆಚ್ ಸಿ ಜಗನ್ನಾಥ ನಾಯ್ಕ, ಪಿಸಿ ಹೇಮಂತ್ ಕುಮಾರ್, ಮಪಿಸಿ ಸವಿತಾ ರವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ತಂಡವು ದಿನಾಂಕ 26.10.2026 ರಂದು ಆರೋಪಿತರಾದ
1) ನಾಗರತ್ನ ಹೆಚ್ (42), ವಾಸ: ಲಕ್ಷ್ಮೀ ಪಿ.ಜಿ., 3rd ಸ್ಟೇಜ್, 3rd ಕ್ರಾಸ್, ಟಿ.ವಿ.ಎಸ್ ಶೋ ರೂಂ ಹತ್ತಿರ, ಬಸವೇಶ್ವರ ನಗರ, ಬೆಂಗಳೂರು-79, ಖಾಯಂ ವಿಳಾಸ: ಮಯ್ಯಾಡಿ ಸೊಸೈಟಿ ಹತ್ತಿರ, ಕೊಲ್ಲೂರು ರೋಡ್, ಯಡ್ತರೆ, ಮಯ್ಯಾಡಿ ಗ್ರಾಮ, ಬೈಂದೂರು
2) ಹೇಮಂತ್ (41), ವಾಸ: ಬಾಲಾಜಿ ಲಾಡ್ಜ್ ಮತ್ತು ರೆಸ್ಟ್ ಹೌಸ್, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹತ್ತಿರ, ಮೆಜೆಸ್ಟಿಕ್, ಬೆಂಗಳೂರು
ಇವರನ್ನು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಬಸವೇಶ್ವರ ನಗರದಲ್ಲಿ ವಶಕ್ಕೆ ಪಡೆದು ತನಿಖಾಧಿಕಾರಿ ಮುಂದೆ ಹಾಜರುಪಡಿಸಿ ದಸ್ತಗಿರಿ ಮಾಡಲಾಗಿದೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now