ಬೆಂಗಳೂರಿನಲ್ಲಿ ರಸ್ತೆ ಅಪಘಾತ : ಉದ್ಯಾವರ ಕಟಪಾಡಿ ಮೂಲದ ಯುವಕ ದಾರುಣ ಸಾವು, ಸಹೋದರ ಗಂಭೀರ

ಬೆಂಗಳೂರಿನಲ್ಲಿ ರಸ್ತೆ ಅಪಘಾತ : ಉದ್ಯಾವರ ಕಟಪಾಡಿ ಮೂಲದ ಯುವಕ ದಾರುಣ ಸಾವು, ಸಹೋದರ ಗಂಭೀರ

0Shares

ಬೆಂಗಳೂರು, ಮೇ 25: ಬೆಂಗಳೂರಿನ ಯಲಹಂಕ ಪಟ್ಟಣದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಉಡುಪಿ ಜಿಲ್ಲೆಯ ಯುವಕನೊಬ್ಬ ಮೃತಪಟ್ಟಿದ್ದು, ಅವರ ಕಿರಿಯ ಸಹೋದರ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ಚಲಿಸುತ್ತಿದ್ದ ಮೋಟಾರ್ ಸೈಕಲ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಮೃತರನ್ನು ಉಡುಪಿ ಜಿಲ್ಲೆಯ ಉದ್ಯಾವರ-ಕಟಪಾಡಿ ಮೂಲದ ಕ್ರೆಸ್ಟನ್ ಪಿಂಟೋ (23) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಅವರ ಕಿರಿಯ ಸಹೋದರ ಕೆಲ್ಲನ್ ಪಿಂಟೋ (21) ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಮೃತರು ಉದ್ಯಾವರ ಬೊಳ್ಜೆ – ಕಟಪಾಡಿಯ ಕಿರಣ್ ಮತ್ತು ಲಿನೆಟ್ ಪಿಂಟೊ ದಂಪತಿಗಳ ಪ್ರಥಮ ಪುತ್ರ.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now