ಶಿರ್ವ : ‘ಪರಿಚಯ’ ಪಾಂಬೂರಿನ ನೂತನ ರಂಗಮಂದಿರಕ್ಕೆ ಶಿಲನ್ಯಾಸ

ಶಿರ್ವ : ‘ಪರಿಚಯ’ ಪಾಂಬೂರಿನ ನೂತನ ರಂಗಮಂದಿರಕ್ಕೆ ಶಿಲನ್ಯಾಸ
0Shares

ಶಿರ್ವ : ಕಲೆ, ಸಾಹಿತ್ಯ, ಸಂಸ್ಕೃತಿ ವಿಷಯಗಳ ಮೇಲೆ ಕಾರ್ಯನಿರ್ವಹಿಸುವ ಪಾಂಬೂರಿನ ಪರಿಚಯ ಪ್ರತಿಷ್ಠಾನ ಸಂಸ್ಥೆಯ ಕನಸಿನ ಯೋಜನೆಯಾದ ನೂತನ ರಂಗ ಮಂದಿರದ ಶಿಲಾನ್ಯಾಸ ಸಮಾರಂಭವು ಜುಲೈ 12 ರoದು ಪಾಂಬೂರಿನ ರಂಗಪರಿಚಯದಲ್ಲಿ ಜರಗಿತು.

ಪಾಂಬೂರು ಚರ್ಚಿನ ಧರ್ಮಗುರುಗಳಾದ ಫಾ. ರೋಷನ್ ಡಿಸೋಜ ಹಾಗೂ ಖ್ಯಾತ ನಾಟಕಕಾರ ಮತ್ತು ರಂಗಕರ್ಮಿ ಫಾ. ಆಲ್ವಿನ್ ಸೆರಾವೊರವರು ಪ್ರಾರ್ಥನಾ ವಿಧಿಗಳೊಂದಿಗೆ ಶಿಲಾನ್ಯಾಸ ಸಮಾರಂಭಕ್ಕೆ ಚಾಲನೆಯನ್ನು ನೀಡಿದರು.

ಪ್ರತಿಷ್ಠಾನದ ಪ್ರವರ್ತಕರಾದ ಮೇರಿ ನೊರೋನ್ನಾರವರು ಶಿಲಾನ್ಯಾಸವನ್ನು ನೆರವೇರಿಸಿದರು. ಮ್ಯಾನೇಜಿಂಗ್ ಟ್ರಸ್ಟಿ ಡಾ. ವಿನ್ಸೆಂಟ್ ಆಳ್ವಾ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆಯ ರೂಪುರೇಶೆಗಳನ್ನು ಹಾಗೂ ಸ್ಥೂಲ ನೋಟವನ್ನು ನೀಡಿದರು. ಕಾರ್ಯದರ್ಶಿ ಪ್ರಕಾಶ್ ನೊರೋನ್ನಾ ಸ್ವಾಗತಿಸಿ, ವಂದನಾರ್ಪಣೆಗೈದರು.
ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್, ಸದಸ್ಯ ನವೀನ್ ಲೋಬೊ, ತುಳು ಅಕಾಡೆಮಿ ಸದಸ್ಯ ನಾಗೇಶ್ ಕುಮಾರ್ ಉದ್ಯಾವರ, ಸಂತೋಷ್ ಶೆಟ್ಟಿ ಹಿರಿಯಡ್ಕ, ಹಿರಿಯ ಸಾಹಿತಿಗಳಾದ ಡಾ. ಎವ್ಜಿನ್ ಡಿಸೋಜಾ, ಅನಿಲ್ ಪೆರ್ನಾಲ್, ರಂಗಕರ್ಮಿಗಳಾದ ಕ್ರಿಸ್ಟೋಫರ್ ಡಿಸೋಜಾ ನೀನಾಸಮ್, ರಾಜು ಮಣಿಪಾಲ, ನೆಲ್ಲು ಪೆರ್ಮನ್ನೂರು, ಪರಿಚಯದ ಟ್ರಸ್ಟಿಗಳು ಹಾಗೂ ಊರಿನ ಹಲವಾರು ಗಣ್ಯರು ಹಾಜರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now