
ಉಡುಪಿ: ಸಾನ್ವಿ ಫ್ರೆಂಡ್ಸ್ ಹಾಗೂ ಅರಸು ಫ್ರೆಂಡ್ಸ್ ದೊಡ್ಡಣಗುಡ್ಡೆ ಇವರ ಜಂಟಿ ಆಶ್ರಯದಲ್ಲಿ ಸಂತೋಷ್ ದೊಡ್ಡಣಗುಡ್ಡೆ ಇವರ ನೇತೃತ್ವದಲ್ಲಿ ಸಾರ್ವಜನಿಕ ಮೈದಾನ ದೊಡ್ಡಣಗುಡ್ಡೆಯಲ್ಲಿ ನಡೆದ 40 ಗಜಗಳ 40+ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾಕೂಟ ಲೆಜೆಂಡ್ ಟ್ರೋಫಿ-2026 ಯಶಸ್ವಿಯಾಗಿ ಸಂಪನ್ನಗೊಂಡಿತು.

ರೋಚಕ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ SFC ಉಡುಪಿ ಫ್ರೆಂಡ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿ ₹1 ಲಕ್ಷ ನಗದು ಬಹುಮಾನ ತನ್ನದಾಗಿಸಿಕೊಂಡಿತು. ಫೈನಲ್ನಲ್ಲಿ ಉತ್ತಮ ಹೋರಾಟ ನೀಡಿದ ಓಂಕಾರೇಶ್ವರ ಸಂಗಮ್, ಪುತ್ತೂರು ತಂಡವು ರನ್ನರ್ಸ್-ಅಪ್ ಸ್ಥಾನ ಪಡೆದು ₹50,000 ನಗದು ಬಹುಮಾನ ಗಳಿಸಿತು.

ವೈಯಕ್ತಿಕ ಪ್ರಶಸ್ತಿ ವಿಜೇತರು
- ಮ್ಯಾನ್ ಆಫ್ ದಿ ಮ್ಯಾಚ್: ರಾಘು – SFC ಉಡುಪಿ
- ಬೆಸ್ಟ್ ಬ್ಯಾಟ್ಸ್ಮನ್: ನಿಯಾಜ್ ಕುಂದಾಪುರ – SFC ಉಡುಪಿ
- ಬೆಸ್ಟ್ ಬೌಲರ್: ವಿಜಯ್ ಅಲೆವೂರು – ಓಂಕಾರೇಶ್ವರ ಸಂಗಮ್
- ಬೆಸ್ಟ್ ಫೀಲ್ಡರ್: ಅರುಣ್ ಬೈಂದೂರು – SFC ಉಡುಪಿ
- ಮ್ಯಾನ್ ಆಫ್ ದಿ ಸೀರೀಸ್: ಸಂದೀಪ್ ಪಿತ್ರೋಡಿ – ಓಂಕಾರೇಶ್ವರ ಸಂಗಮ್ (ಸೈಕಲ್ ಬಹುಮಾನ)
ವಿಜೇತ ತಂಡಗಳ ಆಟಗಾರರು
ಚಾಂಪಿಯನ್ – SFC ಉಡುಪಿ ಫ್ರೆಂಡ್ಸ್:
ನಿಯಾಜ್ ಕುಂದಾಪುರ, ರಾಘು, ಪ್ರಸಾದ್ ಇಂದ್ರಾಳಿ, ಅರೀಫ್ ದೊಡ್ಡಣಗುಡ್ಡೆ, ದಿವಾಕರ್, ರಾಜೇಶ್ ಆಚಾರ್ಯ, ಪ್ರಭಾಕರ್, ಮಂಜುನಾಥ್ ಶೆಟ್ಟಿ, ಅರುಣ್ ಬೈಂದೂರು ಹಾಗೂ ಅಮ್ಮಿ ಮಂಗಳೂರು.
ರನ್ನರ್ಸ್-ಅಪ್ – ಓಂಕಾರೇಶ್ವರ ಸಂಗಮ್, ಪುತ್ತೂರು:
ಪ್ರವೀಣ್ ಪಿತ್ರೋಡಿ, ಅಪ್ಪು ಉದ್ಯಾವರ, ಸಂದೀಪ್ ಪಿತ್ರೋಡಿ, ಅತುಲ್ ಶೆಟ್ಟಿ ಶಿರ್ವ, ಪ್ರವೀಣ್ ಕೊರೆಯ, ಶ್ರೀಕಾಂತ್ ಮೆಂಡನ್, ವಿಜಯ್ ಅಲೆವೂರು, ಪ್ರವೀಣ್, ಸಂತೋಷ್ ಹಾಗೂ ಕರುಣಾಕರ್.
ಪಂದ್ಯಾಕೂಟದ ನಿರೂಪಣೆಯನ್ನು ಸತೀಶ್ ಮಣಿಪಾಲ ಮತ್ತು ರವಿ ಕಡಿಯಾಳಿ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.
40+ ವಯೋಮಾನದ ಹಿರಿಯ ಕ್ರಿಕೆಟಿಗರ ಕ್ರೀಡಾಸ್ಫೂರ್ತಿ, ಅನುಭವ ಹಾಗೂ ಅದ್ಭುತ ಆಟಕ್ಕೆ ಸಾಕ್ಷಿಯಾದ ಲೆಜೆಂಡ್ ಟ್ರೋಫಿ-2026 ಪಂದ್ಯಾಕೂಟವು ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now