ಉಡುಪಿ ಜಿಲ್ಲಾ ಪೊಲೀಸ್ಸಾರ್ವಜನಿಕ ಪ್ರಕಟಣೆAgri Gold ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ

ಉಡುಪಿ ಜಿಲ್ಲಾ ಪೊಲೀಸ್ಸಾರ್ವಜನಿಕ ಪ್ರಕಟಣೆAgri Gold ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ
0Shares

Agri Gold ಕಂಪನಿಯ ಬಾಂಡ್‌ಗಳ ಪರಿಶೀಲನೆಗಾಗಿ ಆಂಧ್ರಪ್ರದೇಶದ ತನಿಖಾ ಸಂಸ್ಥೆಯ ಅಧಿಕಾರಿಗಳು ದಿನಾಂಕಗಳನ್ನು ನಿಗದಿಪಡಿಸಿದ್ದು, ಸಂಬಂಧಪಟ್ಟ ಬಾಂಡ್ ಹೊಂದಿರುವ ಗ್ರಾಹಕರು ತಮ್ಮ ಮೂಲ ಬಾಂಡ್‌ಗಳನ್ನು ತೆಗೆದುಕೊಂಡು ಬನ್ನಂಜೆಯಲ್ಲಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಗೆ ಹಾಜರಾಗಿ, ಆಂಧ್ರಪ್ರದೇಶದಿಂದ ಆಗಮಿಸುವ CID/COD ಉನ್ನತ ಅಧಿಕಾರಿಗಳ ಮುಂದೆ ಪರಿಶೀಲನೆಗಾಗಿ ಸಲ್ಲಿಸಬೇಕು.*
ಪರಿಶೀಲನೆಗೆ ನಿಗದಿಪಡಿಸಿದ ದಿನಾಂಕಗಳು:

  • ದಿನಾಂಕ 29/10/2026: ಹೆಬ್ರಿ ತಾಲೂಕಿನ ಎಲ್ಲಾ ಗ್ರಾಮಗಳ Agri Gold ಬಾಂಡ್ ಹೊಂದಿರುವ ಗ್ರಾಹಕರಿಗೆ ಮಾತ್ರ.
  • ದಿನಾಂಕ 30/10/2026: ಮುನಿಯಾಲು ಹಾಗೂ ಆಸುಪಾಸಿನ ಗ್ರಾಮಗಳ Agri Gold ಬಾಂಡ್ ಹೊಂದಿರುವ ಗ್ರಾಹಕರಿಗೆ ಮಾತ್ರ.
  • ದಿನಾಂಕ 31/10/2026: ಅಜೆಕಾರು ಹಾಗೂ ಆಸುಪಾಸಿನ ಗ್ರಾಮಗಳ Agri Gold ಬಾಂಡ್ ಹೊಂದಿರುವ ಗ್ರಾಹಕರಿಗೆ ಮಾತ್ರ.

ಪ್ರಮುಖ ಸೂಚನೆಗಳು:

  1. ಪ್ರತಿದಿನ ಪ್ರಥಮವಾಗಿ ಆಗಮಿಸುವ 150 ಗ್ರಾಹಕರಿಗೆ ಮಾತ್ರ ಟೋಕನ್ ನೀಡಲಾಗುವುದು.
  2. ಬೆಳಿಗ್ಗೆ 8:00 ಗಂಟೆಯಿಂದ ಟೋಕನ್ ವಿತರಣೆ ಪ್ರಾರಂಭವಾಗುತ್ತದೆ.
  3. ಅಂಗವೈಕಲ್ಯ, ಅನಾರೋಗ್ಯ ಅಥವಾ ಇತರ ಆರೋಗ್ಯ ಸಮಸ್ಯೆಗಳಿಂದ ಸ್ವತಃ ಹಾಜರಾಗಲು ಸಾಧ್ಯವಾಗದ ಗ್ರಾಹಕರ ಪರವಾಗಿ ಅವರ ಏಜೆಂಟ್‌ಗಳು, ಸಂಬಂಧಿಕರು ಬಾಂಡ್‌ಗಳನ್ನು ತಂದು ಸಲ್ಲಿಸಬೇಕು.
  4. ಅಶಕ್ತರು, ಗರ್ಭಿಣಿಯರು ಹಾಗೂ ವೈದ್ಯಕೀಯ ಸಮಸ್ಯೆ ಹೊಂದಿರುವ ಗ್ರಾಹಕರು ಸಂಬಂಧಿತ ವೈದ್ಯಕೀಯ ಪ್ರಮಾಣಪತ್ರಗಳನ್ನು ಅವರು ಅಥವಾ ಸಂಬಂಧಿಕರು ಕಡ್ಡಾಯವಾಗಿ ತಂದು ಹಾಜರುಪಡಿಸಬೇಕು.
  5. ದಿನಾಂಕ : 01/11/2026 ರಂದು ರಜೆ ಇದ್ದು ದಿನಾಂಕ : 02/11/2026 ರಿಂದ ಯಾವ ತಾಲೂಕು, ಜಿಲ್ಲೆ ಗ್ರಾಹಕರಿಗೆ ಎಂದು 31/11/2026 ರ ಸಂಜೆ ಒಳಗೆ ತಿಳಿಸಲಾಗುವುದು.
  6. ದಿನಾಂಕ : 29/30/31 ರಂದು ಹೆಬ್ರಿ ತಾಲೂಕಿನಿಂದ ಬಂದ ಉಳಿದ ಗ್ರಾಹಕರಿಗೆ ಮುಂದಿನ ದಿನಾಂಕವನ್ನು ತಿಳಿಸಲಾಗುವುದು
  7. ಈ ಮೂರು ದಿನದಂದು ಹೆಬ್ರಿ ತಾಲೂಕಿನವರಿಗೆ ಮಾತ್ರ ಬರಲು ಅವಕಾಶ

ಸಂಪರ್ಕ ಸಂಖ್ಯೆಗಳು:

📞 08202526444
📞 9480805400

ಸಂಬಂಧಪಟ್ಟ ಗ್ರಾಹಕರು ತಮ್ಮ ವ್ಯಾಪ್ತಿಗೆ ನಿಗದಿಪಡಿಸಿದ ದಿನಾಂಕದಂದು ಮಾತ್ರ ಹಾಜರಾಗಿ ಪರಿಶೀಲನಾ ಪ್ರಕ್ರಿಯೆಗೆ ಸಹಕರಿಸುವಂತೆ ಸೂಚಿಸಲಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now