
ಸೈಕಲ್ಗೆ ಲಾರಿ ಡಿಕ್ಕಿ; ಸವಾರ ಸಾವು
ಬ್ರಹ್ಮಾವರ : ಮಾಬುಕಳ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ 62 ವರ್ಷದ ಸೈಕಲ್ ಸವಾರರೊಬ್ಬರಿಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ಘಟನೆ ಮಾಬುಕಳದ ಎನ್ಹೆಚ್ 66ರಲ್ಲಿ ಅಕ್ಟೋಬರ್ 22ರಂದು ನಡೆದಿದೆ.
ಮೃತರನ್ನು ಚಲನಚಿತ್ರ ನಟಿ ರಂಜಿತಾ ಲೂಯಿಸ್ ಅವರ ತಂದೆ ರೊನಾಲ್ಡ್ ಲೂಯಿಸ್ (62) ಎಂದು ಗುರುತಿಸಲಾಗಿದೆ.
ರೊನಾಲ್ಡ್ ಅವರು ಮಾಬುಕಳ ಬಳಿ ತಮ್ಮ ಸೈಕಲ್ನೊಂದಿಗೆ ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ಯತ್ನಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾಪುವಿನಿಂದ ಕುಮಟಾ ಕಡೆಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಬಂದ ಲಾರಿಯೊಂದು ಅವರಿಗೆ ಡಿಕ್ಕಿ ಹೊಡೆದಿದೆ.
ಅವರನ್ನು ತಕ್ಷಣವೇ ಬ್ರಹ್ಮಾವರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಮೃತರು ಪತ್ನಿ ಮತ್ತು ಮಗಳಾದ ನಟಿ ರಂಜಿತಾ ಲೂಯಿಸ್ ಹಾಗೂ ಅಪಾರ ಬಂಧು ಬಳಗದವರನ್ನು ಅವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಸಂಜೆ ಸಾಸ್ತಾನದಲ್ಲಿ ನಡೆಯಲಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now