ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸನ್ಮಾನದ ಗೌರವ ಧನ ಒಂಟಿ ಕ್ಯಾನ್ಸರ್ ಪೀಡಿತ ಮಹಿಳೆಯ ಚಿಕಿತ್ಸೆಗೆ

ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸನ್ಮಾನದ ಗೌರವ ಧನ ಒಂಟಿ ಕ್ಯಾನ್ಸರ್ ಪೀಡಿತ ಮಹಿಳೆಯ ಚಿಕಿತ್ಸೆಗೆ
0Shares

ಉಡುಪಿ ಸೆ.7: ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿಯವರಿಗೆ ಗೌರವ ಸನ್ಮಾನ ಮಾಡಿ ಸನ್ಮಾನದೊಂದಿಗೆ ಗೌರವ ಧನ ನೀಡಿದ್ದು ಸದ್ರಿ ಮೊತ್ತವನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ ಒಂಟಿಯಾಗಿ ಬದುಕುತ್ತಿದ್ದ ಕ್ಯಾನ್ಸರ್ ಪೀಡಿತ ಮಹಿಳೆಗೆ ವಿಶು ಶೆಟ್ಟಿ ನೀಡಿ ಸಹಕರಿಸಿದ್ದಾರೆ.

ಮಹಿಳೆ ವಜ್ರೇಶ್ವರಿ (34) ಕುಂದಾಪುರ ಮೂಲದವರಾಗಿದ್ದು ತಾಯಿ ಇತ್ತೀಚೆಗೆ ತೀರಿಕೊಂಡಿದ್ದು ಒಂಟಿ ಮಹಿಳೆಯೇ ಜೀವಿಸುತ್ತಿದ್ದು ಇದೀಗ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದಾರೆ. ಮಹಿಳೆಯ ಅಸಹಾಯಕತೆಯ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿಯವರು ಸನ್ಮಾನದ ಗೌರವ ಧನ ರೂ.15000/-ಮೊತ್ತಕ್ಕೆ ರೂಪಾಯಿ 3,000/- ಸೇರಿಸಿ ಒಟ್ಟು ರೂ. 18000/- ಹಣವನ್ನು ನೀಡಿ ಸಹಕರಿಸಿದ್ದಾರೆ. ಮಹಿಳೆಯ ಅಸಹಾಯಕತೆಯ ಬಗ್ಗೆ ಸಖಿ ಸೆಂಟರ್ ನಲ್ಲಿ ಕಾನೂನು ನೆರವಿಗಾಗಿ ಮನವಿ ಕೂಡ ನೀಡಲಾಗಿದೆ.

ಸಂಘ ಸಂಸ್ಥೆಗಳು ಸನ್ಮಾನಿಸುವಾಗ ಕೆಲವು ಸಂಸ್ಥೆಗಳು ಗೌರವ ಧನ ನೀಡುತ್ತಾರೆ. ಅಂತಹ ಗೌರವ ಧನಕ್ಕೆ ಸ್ವಲ್ಪ ಸೇರಿಸಿ ಅಸಹಾಯಕ ಮಹಿಳೆಯರಿಗೆ ಅಥವಾ ಮಕ್ಕಳಿಗೆ ನೀಡುತ್ತಾ ಬಂದಿದ್ದೇನೆ. ಈ ಬಾರಿ ಕ್ಯಾನ್ಸರ್ ಪೀಡಿತ ಒಂಟಿ ಮಹಿಳೆಗೆ ನೀಡಿದ್ದೇನೆ.

ವಿಶು ಶೆಟ್ಟಿ ಅಂಬಲಪಾಡಿ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now